Job Description: * ಇತ್ತೀಚಿಗೆ ದುಬೈನಲ್ಲಿ ನಡೆಯುತ್ತಿರುವ ಟ್ವೆಂಟಿ-20 ಕ್ರಿಕೆಟ್ನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು 10,000 ರನ್ಗಳ ಮೈಲಿಗಲ್ಲುನ್ನು ಪೂರೈಸಿದ್ದಾರೆ. * ಪ್ರಸ್ತುತ ಟಿ20 ಕ್ರಿಕೆಟ್ನಲ್ಲಿ 10,000 ರನ್ ಮೈಲಿಗಲ್ಲು ಪೂರೈಸಿದ ವಿಶ್ವದ 5ನೇ ಹಾಗೂ ಭಾರತದ ಮೊಟ್ಟ ಮೊದಲ ಬ್ಯಾಟ್ಸ್ಮನ್ ಇವರಾಗಿದ್ದಾರೆ. * ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ನಾಯಕ ವಿರಾಟ್ ಕೊಹ್ಲಿ ಅವರು IPL ನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ, ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಈ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ. * ಟ್ವೆಂಟಿ-20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿ ದಾಖಲೆಯನ್ನು ಹೊಂದಿದವರು: - ವೆಸ್ಟ್ಇಂಡೀಸ್, ಕ್ರಿಸ್ ಗೇಲ್ 14,275 - ವೆಸ್ಟ್ಇಂಡೀಸ್ ಕೀರನ್ ಪೊಲಾರ್ಡ್ 11,195 - ಪಾಕಿಸ್ತಾನ, ಶೋಯಬ್ ಮಲಿಕ್ 10,808 - ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ 10,019 - ಭಾರತ, ವಿರಾಟ್ ಕೊಹ್ಲಿ 10,000* ಗಳ ಮೈಲಿಗಲ್ಲುನ್ನು ತಲುಪಿದ್ದಾರೆ.