Job Description: * ಇತ್ತೀಚಿಗೆ ಅಸ್ಸಾಂ ಸರ್ಕಾರವು ತನ್ನ ಅಧೀನದಲ್ಲಿರುವ 2,479 ಖಡ್ಗಮೃಗಗಳ ಕೊಂಬುಗಳನ್ನು ಸಾರ್ವಜನಿಕವಾಗಿ ಜನಗಳ ಮುಂದೆಯೇ ದಹನ ಮಾಡಿದೆ, ಈ ದಹನ ಪ್ರಕ್ರಿಯೆಯು ಅಂತಾರಾಷ್ಟ್ರೀಯ ಖಡ್ಗಮೃಗಗಳ ದಿನಾಚರಣೆಯ ದಿನದಂದು ಜರುಗಿದೆ. * ಅಸ್ಸಾಂ ರಾಜ್ಯದ ಜನಗಳು ಈ ಖಡ್ಗಮೃಗಗಳ ಕೊಂಬುಗಳು ಔಷಧಿಗೆ ಬಳಕೆಯಾಗುತ್ತವೆ ಎಂಬ ಮೂಢನಂಬಿಕೆಯನ್ನು ಹೊಂದಿದ್ದರು, ಈ ಮೂಢನಂಬಿಕೆಯನ್ನು ಹೋಗಲಾಡಿಸಲು ಕೊಂಬುಗಳ ದಹನ ಪ್ರಕ್ರಿಯೆಯನ್ನು ಮಾಡಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ. * ಖಡ್ಗಮೃಗಗಳ ಕೊಂಬುಗಳು ಯಾವ ಕೆಲಸಕ್ಕು ಉಪಯೋಗವಿಲ್ಲ ಎಂದು ಖಡ್ಗಮೃಗಗಳನ್ನು ಬೇಟೆಯಾಡಿ ಕೊಂಬುಗಳನ್ನು ಸಂಗ್ರಹಿಸುವವರಿಗೆ ಇದರ ಮಾಹಿತಿಯನ್ನು ನೀಡಿದ್ದಾರೆ.