Job Description: * ಭಾರತ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೇಶಗಳ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗೆ ಚಾಲನೆ ಸಿಕ್ಕೆದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪಿಯೂಷ್ ಗೋಯಲ್ ಅವರು ತಿಳಿಸಿದ್ದಾರೆ. * ಪ್ರಸ್ತುತ ಉಭಯ ರಾಷ್ಟ್ರಗಳು ಈ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಈ ವರ್ಷದ ಕೊನೆಯಲ್ಲಿ ಮುಕ್ತಾಯಗೊಳ್ಳಲಿವೆ ಎಂದಿದ್ದಾರೆ, ಹಾಗೂ 2022 ರ ಮಾರ್ಚ್ ನಲ್ಲಿ ಈ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕುವ ಸಾಧ್ಯೆತೆಗಳಿವೆ ಎಂದು ತಿಳಿದು ಬಂದಿದೆ. * ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪಿಯೂಷ್ ಗೋಯಲ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ವಿದೇಶಿ ವ್ಯಾಪಾರ ಖಾತೆ ಸಚಿವ ತಾನಿ ಬಿನ್ ಅಹ್ಮದ್ ಝೆಯೋದಿ ಅವರನ್ನು ಭೇಟಿಯಾಗಿ ಸದ್ಯ ಇರುವಂತಹ ವಹಿವಾಟುಗಳ ವಿಸ್ತರಣೆ ಹಾಗೂ ಹೂಡಿಕೆಯ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚೆ ನಡೆಸಿದರು. * ಈ ಮೊದಲು ಭಾರತ ಮತ್ತು ಯುಎಇ 2017 ರಲ್ಲಿ ಸಮಗ್ರ ಪ್ರಮುಖ ಪಾಲುದಾರಿಕೆ ಒಪ್ಪಂದಗಳಿಗೆ ಸಹಿ ಹಾಕಿದ್ದವು. * ಪ್ರಸ್ತುತ ಉಭಯ ದೇಶಗಳ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಉದ್ಯೋಗ, ಜನರ ಜೀವನಮಟ್ಟ ಸುಧಾರಣೆಯ ಗುರಿಯನ್ನು ಹೊಂದಿವೆ, ಹೊಸ ಆರ್ಥಿಕ ಒಪ್ಪಂದವು ಮುಂಬರುವ 5ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 100 ಶತಕೋಟಿ ಡಾಲರ್ ಗೆ ವೃದ್ಧಿಸುವ ನಿರೀಕ್ಷೆಯಿದೆ ಎಂದು ಉಭಯ ದೇಶಗಳ ನಾಯಕರು ತಿಳಿಸಿದ್ದಾರೆ.