Job Description: * ಪ್ರಸ್ತುತ ಬ್ರಿಟನ್, ಆಸ್ಟ್ರೇಲಿಯಾ ಜೊತೆಗೂಡಿ ರಚಿಸಲಾದ ತ್ರಿಪಕ್ಷೀಯ ಔಕಸ್ ಮೈತ್ರಿಕೂಟಕ್ಕೆ ಭಾರತ ಹಾಗೂ ಜಪಾನ್ ರಾಷ್ಟಗಳನ್ನು ಸೇರ್ಪಡೆ ಮಾಡಲಾಗುವದಿಲ್ಲ ಎಂದು ಅಮೇರಿಕ ತಿಳಿಸಿದೆ. * ಇತ್ತೀಚಿಗೆ ಬ್ರಿಟನ್, ಆಸ್ಟ್ರೇಲಿಯಾ ಹಾಗೂ ಅಮೇರಿಕ ದೇಶಗಳು ಹಿಂದೂ ಮಹಾಸಾಗರ- ಪೆಸಿಫಿಕ್ ಪ್ರದೇಶದ ಭದ್ರತೆಗಾಗಿ ರಚಿಸಿರುವ ಈ ತ್ರಿಪಕ್ಷೀಯ ಮೈತ್ರಿಕೂಟದಲ್ಲಿ ಇತರ ದೇಶಗಳಿಗೆ ಸ್ಥಾನವನ್ನು ನೀಡಲಾಗುವದಿಲ್ಲ ಎಂದು ಅಮೇರಿಕ ತಿಳಿಸಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರು ತಿಳಿಸಿದ್ದಾರೆ. * ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇದೇ ಸೆಪ್ಟೆಂಬರ್. 15 ರಂದು ಈ 'ಔಕಸ್' ಮೈತ್ರಿಕೂಟವನ್ನು ಘೋಷಣೆ ಮಾಡಿದ್ದಾರೆ.