Job Description: * ಪ್ರಸ್ತುತ ಪಿಎಂ-ಕೇರ್ಸ್ ಫಂಡ್ ಭಾರತ ಸರ್ಕಾರದ ಸಂಸ್ಥೆಯಲ್ಲ, ಇದು ಭಾರತದ ಕಾನೂನಿನಡಿ ಚ್ಯಾರಿಟೇಬಲ್ ಟ್ರಸ್ಟ್ ಆಗಿದೆ, ಹಾಗೂ ಈ ಫಂಡ್ ಗೆ ಹರಿದು ಬರುವ ಹಣ ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾಗೆ ಸಮಬಂಧಪಟ್ಟಿರುವದಿಲ್ಲ ಎಂದು ಪ್ರಧಾನಿ ಕಾರ್ಯಾಲಯದ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರು ದಿಲ್ಲಿ ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ. * ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರು ತಿಳಿಸಿರುವ ಮಾಹಿತಿಯ ಪ್ರಕಾರ ಒಂದು ಟ್ರಸ್ಟ್ ಭಾರತದ ಸಂವಿಧಾನದ 12 ನೇ ವಿಧಿ ಅಡಿಯಲ್ಲಿ ಸರ್ಕಾರದಾಗಿರಲಿ ಅಥವಾ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 2 ರ ಅನ್ವಯ ಸಾರ್ವಜನಿಕ ಸಂಸ್ಥೆಯಾಗಿದ್ದರು 3 ನೇ ಪಕ್ಷ ವಿಷಯದ ಮಾಹಿತಿಯನ್ನು ಬಹಿರಂಗಪಡಿಸಲು ಅವಕಾಶವಿರುವದಿಲ್ಲ ದೆಹಲಿ ನ್ಯಾಯಾಲಯಕ್ಕೆ ಈ ಎಲ್ಲ ಮಾಹಿತಿಯನ್ನು ನೀಡಿದ್ದಾರೆ. * ಪ್ರಸ್ತುತ ಈ ಪಿಎಂ-ಕೇರ್ಸ್ ಫಂಡ್'ನ್ನು ಸರಕಾರಿ ಫಂಡ್ ಎಂದು ಘೋಷಣೆ ಮಾಡಲು ಸಂಯಕ್ ಗಂಗ್ವಾಲ್ ಎಂಬವರು ಅರ್ಜಿ ಸಲ್ಲಿಸಿದ್ದರು, ಈ ಅರ್ಜಿಗೆ ಪ್ರತಿಕ್ರಿಯೆಯಾಗಿ ಪ್ರಧಾನಿ, ಗೃಹ, ರಕ್ಷಣಾ, ವಿತ್ತ ಸಚಿವರು ಟ್ರಸ್ಟಗಳ ಈ ಫಂಡ್ ಮೇಲೆ ಸರ್ಕಾರದ ನಿಯಂತ್ರಣ ಇರುವದಿಲ್ಲ ಎಂದು ತಿಳಿದು ನಾಗರಿಕರ ಪರವಾಗಿ ಈ ಅರ್ಜಿಯಲ್ಲಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. * ಈ ಟ್ರಸ್ಟ್ ನ ಅಧಿಕೃತ ವೆಬ್ಸೈಟ್ನಲ್ಲಿ ಪಾರದರ್ಶಕತೆಗಾಗಿ ಆಡಿಟ್ ಮಾಹಿತಿ ಹಾಗೂ ಈ ಟ್ರಸ್ಟ್ ಹಣ ಬಳಸಿರುವ ಮಾಹಿತಿಯನ್ನು ಕೂಡ ಅದರಲ್ಲಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.