Job Description: * ಪ್ರಸ್ತುತ ವಿಜ್ಞಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿರುವವರು ಇದೀಗ ತಮ್ಮ ನೆಲದಲ್ಲೇ ಈ ಪ್ರಶಸ್ತಿಯನ್ನು ಸ್ವೀಕಾರ ಮಾಡಲಿದ್ದಾರೆ ಎಂದು ನೊಬೆಲ್ ಪ್ರಶಸ್ತಿ ಪ್ರತಿಷ್ಠಾನವು ತಿಳಿಸಿದೆ. * ಸತತವಾಗಿ 2 ನೇ ವರ್ಷವು ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನಲೆಯಿಂದಾಗಿ ಈ ರೀತಿ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ ಎಂದಿದ್ದಾರೆ. * ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾದವರನ್ನು ಓಸ್ಲೋಗೆ ಕರೆಸುವ ವಿಚಾರವನ್ನು ಅಕ್ಟೋಬರ್ ಮಧ್ಯದಲ್ಲಿ ಪ್ರಕಟಿಸಲಾಗುವದು ಎಂದು ನೊಬೆಲ್ ಪ್ರಶಸ್ತಿ ನೀಡುವ ಸಮಿತಿಯು ಹೇಳಿದೆ. * ಈ ಹಿಂದಿನ ವರ್ಷ ಸಾಂಕ್ರಾಮಿಕ ರೋಗ ಕೋವಿಡ್-19 ಸಲುವಾಗಿ ವಿದೇಶ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿತ್ತು ಈ ಕಾರಣದಿಂದ ತಮ್ಮ ನೆಲದಲ್ಲಿ ವಿಜೇತರಿಗೆ ಈ ವಿಜ್ಞಾನ ಮತ್ತು ಸಾಹಿತ್ಯದ ನೊಬೆಲ್ ಪ್ರಶಸ್ತಿಗಳನ್ನು ಪ್ರಶಸ್ತಿಯನ್ನು ನೀಡಲಾಗಿದೆ, ಈ ಬಾರಿಯೂ ಕೂಡ ಅದೇ ತರೇನಾಗಿ 2021 ನೇ ಸಾಲಿನ ವಿಜೇತರು ತಮ್ಮ ಪ್ರಶಸ್ತಿ ತಾವ್ ಇರುವ ನೆಲದಲ್ಲೇ ಪ್ರಶಸ್ತಿ ಪಡೆಯಲಿದ್ದಾರೆ ಎಂದು ನೊಬೆಲ್ ಪ್ರತಿಷ್ಠಾನದ ಕಾರ್ಯನಿರ್ವಾಹಕ ನಿರ್ದೇಶಕ ವಿದಾರ್ ಹೆಲ್ಗೆಸನ್ ಅವರು ತಿಳಿಸಿದ್ದಾರೆ. * ಈ ವರ್ಷ ನೊಬೆಲ್ ಪ್ರತಿಷ್ಠಾನಕ್ಕೆ 120 ನೇ ವರ್ಷದ ವಾರ್ಷಿಕೋತ್ಸವ, ಪ್ರಸ್ತುತ ವೈದ್ಯಕೀಯ, ರಾಸಾಯನ ವಿಜ್ಞಾನ, ಭೌತವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ನೊಬೆಲ್ ಪ್ರಶಸ್ತಿಗಳನ್ನು ಇದೇ ಅಕ್ಟೋಬರ್ 4 ಮತ್ತು 11 ರ ಮಧ್ಯೆ ಘೋಷಣೆ ಮಾಡಲಾಗುವದು ಎಂದು ತಿಳಿಸಿದ್ದಾರೆ.