Job Description: * ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಒಮನ್ನಲ್ಲಿ ಆರಂಭವಾಗಲಿರುವ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ 'ಲಿವ್ ದ ಗೇಮ್, ಲವ್ ದ ಗೇಮ್' ಎಂಬ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ. * ಈ ಗೀತೆಯ ವಿಡಿಯೊವನ್ನು ಅವತಾರ್ಸ್ ಆಯನಿಮೇಷನ್ ಮಾದರಿಯಲ್ಲಿ ಸಿದ್ದಪಡಿಸಲಾಗಿದೆ, ಈ ಆಯನಿಮೇಷನ್ ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವೆಸ್ಟ್ ಇಂಡೀಸ್ ತಂಡದ ಆಟಗಾರ ಕೀರನ್ ಪೊಲಾರ್ಡ್ ಅವರ ಪ್ರತಿಕೃತಿಗಳಿವೆ, ಅಷ್ಟೇ ಅಲ್ಲದೇ ಬೇರೆ ಬೇರೆ ದೇಶಗಳ ಯುವ ಅಭಿಮಾನಿಗಳು ವಿಶ್ವಕಪ್ ಟೂರ್ನಿಗಾಗಿ ಕಾಯುತ್ತಿರುವ ಚಿತ್ರಗಳನ್ನು ಸಹ ಚಿತ್ರಿಸಲಾಗಿದೆ. * ಪ್ರಸ್ತುತ ಸ್ಟಾರ್ ಸ್ಪೋರ್ಟ್ಸ್, ಬಿಸಿಸಿಐ(BCCI) ಮತ್ತು ಐಸಿಸಿ(ICC)ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊವನ್ನು ಹಚ್ಚಿಕೊಳ್ಳಲಾಗಿದೆ ಎಂದು ಐಸಿಸಿ(ICC)ಯ ಸಂವಹನ ವಿಭಾಗದ ಕ್ಲೇರ್ ಫರ್ಲಾಂಗ್ ಅವರು ತಿಳಿಸಿದ್ದಾರೆ.