Job Description: * ಪ್ರಸ್ತುತ ಲೇಹ್'ನ ಸಿಂಧು ಸಂಸ್ಕೃತಿ ಕೇಂದ್ರದಲ್ಲಿ ಹಿಮಾಲಯನ್ ಚಲನಚಿತ್ರೋತ್ಸವದ ಮೊದಲ ಆವೃತ್ತಿಯನ್ನು ಆಯೋಜಿಸುತ್ತಿದೆ, ಹಾಗೂ ಈ ಕಾರ್ಯಕ್ರಮವನ್ನು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಉದ್ಘಾಟಣೆ ಮಾಡಲಿದ್ದಾರೆ. * ಈ ಹಿಮಾಲಯನ್ ಚಲನಚಿತ್ರೋತ್ಸವ ಇದೇ ಸೆಪ್ಟೆಂಬರ್ 24 ರಿಂದ 28 ರವರೆಗೆ ಅಂದರೆ 5ದಿನಗಳ ವರೆಗೆ ಜರುಗಲಿದೆ. * ಪ್ರಸ್ತುತ ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ 'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಂಗವಾಗಿ ಲಡಾಖ್ ಈ ಚಲನಚಿತ್ರೋತ್ಸವವನ್ನು ಆಯೋಜಿಸಲು ಸಿದ್ಧವಾಗಿದೆ, ಲಡಾಖ್'ನ್ನು ಆಕರ್ಷಕ ಚಲನಚಿತ್ರ ತಾಣವಾಗಿಸುವ ಉದ್ದೇಶದಿಂದ 5 ದಿನಗಳವರೆಗೆ ಈ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದೆ. * ಪ್ರಪಂಚದಾದ್ಯಂತದ ಇರುವ ಚಲನಚಿತ್ರ ನಿರ್ಮಾಪಕರನ್ನು ಭಾರತದ ಹಿಮಾಲಯ ಪ್ರದೇಶವು ರಮಣೀಯ ಕೊಡುಗೆಯಿಂದ ಆಕರ್ಷಣೆ ಮಾಡುತ್ತಿದೆ, ಹಾಗೂ ಸ್ಥಳೀಯ ಚಲನಚಿತ್ರ ನಿರ್ಮಾಪಕರಿಗೆ ಹಾಗೂ ಪ್ರೇಕ್ಷಕರಿಗೆ ಅವಕಾಶವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.