Job Description: * ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ನಡೆಸಿರುವ ಅಧ್ಯಯನದ ಪ್ರಕಾರ, ಭಾರತವು 2022 ರ ವೇಳೆಗೆ ಕೈಗಾರಿಕಾ ಟ್ರಾನ್ಸ್ ಕೊಬ್ಬು ಮುಕ್ತವಾಗಿಸಲು ಎಲ್ಲಾ ಸಿದ್ಧತೆಯನ್ನು ಹೊಂದಿದೆ. * ಪ್ರಸ್ತುತ FSSAI ಪ್ಯಾನ್-ಇಂಡಿಯಾ ಸಮೀಕ್ಷೆಯ ಪ್ರಕಾರ ಸಂಸ್ಕರಿಸಿದ ಆಹಾರ ಉತ್ಪನ್ನಗಳಲ್ಲಿ ಕೈಗಾರಿಕಾ ಟ್ರಾನ್ಸ್ ಕೊಬ್ಬಿನ ಅತಿಯಾದ ಬಳಕೆಯ ಗ್ರಹಿಕೆಯನ್ನು ತಗೆದು ಹಾಕಿದೆ ಎನ್ನಲಾಗಿದೆ, ಅಷ್ಟೇ ಅಲ್ಲದೇ WHO ನ ಮಾರ್ಗಸೂಚಿ ಬಿಡುಗಡೆ ಯಾಗುವದಕ್ಕೂಮೊದಲೇ ಅಂದರೆ 2022 ರ ವೇಳೆಗೆ ಭಾರತವನ್ನು ಕೈಗಾರಿಕಾ ಉತ್ಪಾದನೆಯ ಟ್ರಾನ್ಸ್ ಕೊಬ್ಬಿನ ಮಿತಿಯನ್ನು ಶೇ. 2 ಕ್ಕೆ ಕಡಿಮೆಗೊಳಿಸಲು ಭಾರತವು ಆದೇಶ ನೀಡಿದೆ. * FSSAI ನ ಸಮೀಕ್ಷೆಯ ಪ್ರಕಾರ 6,000 ಸಂಸ್ಕರಿಸಿದ ಆಹಾರದ ಮಾದರಿಗಳಲ್ಲಿ 34% ಕೊಬ್ಬುಗಳಲ್ಲಿ ಅಧಿಕವಾಗಿದೆ, ಹಾಗೂ 3% ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮಾದರಿಗಳು 2% ಕ್ಕಿಂತ ಹೆಚ್ಚು ಟ್ರಾನ್ಸ್ ಕೊಬ್ಬನ್ನು ಹೊಂದಿವೆ ಎಂದು ತಿಳಿಸಿದ್ದಾರೆ. * WHO ನ ಪ್ರಕಾರ ಟ್ರಾನ್ಸ್ ಕೊಬ್ಬಿನ ಶಕ್ತಿಯ ಸೇವನೆಯ 1% ಕ್ಕಿಂತ ಹೆಚ್ಚಿನ ಹೃದಯ ಕಾಯಿಲೆಯ ಸಾವಿನ ಪ್ರಕರಣಗಳು ಹೆಚ್ಚಲಿವೆ ಎಂದಿದ್ದಾರೆ, ಪ್ರಸ್ತುತ ವಿಶ್ವಾದ್ಯಂತ ಈ ಟ್ರಾನ್ಸ್ ಕೊಬ್ಬು ಸೇವನೆಯಿಂದಾಗಿ ಪ್ರತಿ ವರ್ಷ ಪರಿಧಮನಿಯ ಹೃದಯ ಕಾಯಿಲೆಯಿಂದ 5,00,000 ಅಕಾಲಿಕ ಮರಣಗಳು ಸಂಭವಿಸಿವೆ.