Job Description: * ಶ್ರೀಲಂಕಾ ದೇಶವು ಫಿಜರ್ ಕೋವಿಡ್ -19 ಲಸಿಕೆಯ 14 ಮಿಲಿಯನ್ ಡೋಸ್ಗಳನ್ನು ಸಂಗ್ರಹಣೆ ಮಾಡಲು ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) 100 ಮಿಲಿಯನ್ ಡಾಲರ್ ಸಾಲವನ್ನು ಕೇಳುತ್ತಿದೆ. * ಶ್ರೀಲಂಕಾ ಈ IMF ನ ಸಾಲದಿಂದಾಗಿ ಅಲ್ಲಿನ ಇತರ ವ್ಯಾಕ್ಸಿನೇಷನ್ ಕಾರ್ಯಕ್ರಮಗಳ ವೆಚ್ಚಗಳಿಗೆ ಹಣಕಾಸು ನೀಡಲಿದೆ ಎಂದು ಅಲ್ಲಿನ ಆರೋಗ್ಯ ಸಚಿವ ಕೆಹೆಲಿಯಾ ರಂಬುಕ್ವೆಲ್ಲಾ ತಿಳಿಸಿದ್ದಾರೆ. * ಶ್ರೀಲಂಕಾ ದೇಶದಲ್ಲಿನ ಕೋವಿಡ್ -19 ಪ್ರತಿಕ್ರಿಯೆಗೆ ಸಹಾಯ ಒದಗಿಸಲು IMF ಇದೀಗ 100 ಮಿಲಿಯನ್ ಡಾಲರ್ ಸಾಲವನ್ನು ಒದಗಿಸಲು ಸಮ್ಮತಿಯನ್ನು ನೀಡಿದೆ. * ಶ್ರೀಲಂಕಾ ದೇಶವು 21 ಮಿಲಿಯನ್ ಜನಸಂಖ್ಯೆಯಲ್ಲಿ ಶೇ. 50 ಕ್ಕಿಂತಲೂ ಹೆಚ್ಚಿನ ಜನಸಂಖ್ಯೆಗೆ ಕೋವಿಡ್-19 ಲಸಿಕೆಯನ್ನು ಹಾಕಿದೆ. * IMF ಇದೊಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿದೆ, ಇದು ತನ್ನ ಪ್ರಧಾನ ಕಚೇರಿಯನ್ನು ಅಮೇರಿಕದ ವಾಷಿಂಗ್ಟನ್, DC ಯಲ್ಲಿ ಹೊಂದಿದೆ, ಹಾಗೂ ಇದು 190 ದೇಶಗಳನ್ನು ಒಳಗೊಂಡಿದೆ. * ಈ IMF'ನ್ನು 1944 ರಲ್ಲಿ ಸ್ಥಾಪನೆ ಮಾಡಲಾಗಿದೆ ಆದರೆ ಇದು 1945 ರಲ್ಲಿ ಅಸ್ತಿತ್ವಕ್ಕೆ ತರಲಾಯಿತು.