Job Description: * ಪ್ರಸ್ತುತ ಮಹಾರಾಷ್ಟ್ರ ಸರ್ಕಾರವು ಮಹಿಳಾ ಕಾನ್ಸ್ಟೇಬಲ್ಗಳಿಗೆ ವೃತ್ತಿ ಹಾಗೂ ವೈಯಕ್ತಿಕ ಜೀವನವನ್ನು ಸಮತೋಲವಾಗಿ ನಡೆಸಲು ಸಹಾಯ ಮಾಡುವ ನಿಟ್ಟಿನಲ್ಲಿ ಅವರ ಕೆಲಸದ ಸಮಯವನ್ನು 12 ಗಂಟೆಯಿಂದ 8 ಗಂಟೆಗೆ ಕಡಿಮೆಗೊಳಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. * ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿರುವ ಸಂಜಯ್ ಪಾಂಡೆ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ, ಪ್ರಸ್ತುತ ನಾಗ್ಪುರ ನಗರ, ಅಮರಾವತಿ ನಗರ ಹಾಗೂ ಪುಣೆ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಜಾರಿಗೆ ತರಲಾಗುವದು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಇನ್ನು ಕೆಲವೆ ದಿನಗಳಲ್ಲಿ ರಾಜ್ಯದ ನಗರ ಮತ್ತು ಜಿಲ್ಲೆಗಳಲ್ಲಿಯೂ ಕೂಡ ಮಹಿಳಾ ಕಾನ್ಸ್ಟೇಬಲ್ಗಳ ಕರ್ತವ್ಯದ ಸಮಯ ಕಡಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. * ಪ್ರಸ್ತುತ ಈ ಕ್ರಮವನ್ನು ಆಗಸ್ಟ್ 28 ರಂದು ಮೊದಲು ಜಾರಿಗೆ ತರಲಾಗಿದೆ ಎಂದು ನಾಗ್ಪುರ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಅವರು ಹೇಳಿದ್ದಾರೆ.