Job Description: * ಪ್ರಸ್ತುತ 2020 ನೇ ವರ್ಷದಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚಿನ ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿವೆ ಎಂದು ಎನ್ಸಿಆರ್ಬಿ ವರದಿ ಮಾಡಿದೆ. * 2020 ರ ಫೆಬ್ರವರಿ ತಿಂಗಳಿಂದ ನವೆಂಬರ್ ತಿಂಗಳ ವರೆಗೆ ಕರ್ನಾಟಕದಲ್ಲಿ 2074 ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ ಎಂದು ಕರ್ನಾಟಕದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. * ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನ (NCRB) 2020 ನೇ ವರ್ಷದ ಮಾಹಿತಿಯ ಪ್ರಕಾರ, ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಅಡಿಯಲ್ಲಿ ಕರ್ನಾಟಕದಲ್ಲಿಯೇ 184, ಅಸ್ಸಾಂ 138, ಪಶ್ಚಿಮ ಬಂಗಾಳ 98, ತಮಿಳುನಾಡು 77 ಮತ್ತು ತೆಲಂಗಾಣ 62 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಅತೀ ಹೆಚ್ಚು ಸಂಖ್ಯೆಯ ಹೆಣ್ಣುಮಕ್ಕಳು ಬಾಲ್ಯವಿವಾಹ ವಾಗುತ್ತಿರುವ ರಾಜ್ಯಗಳಲ್ಲಿ ಬಿಹಾರ, ಪಶ್ಚಿಮ ಬಂಗಾಳ ಹಾಗೂ ತ್ರಿಪುರ ರಾಜ್ಯಗಳು ಮೊದಲ ಸ್ಥಾನದಲ್ಲಿವೆ. * ಬಾಲ್ಯವಿವಾಹದ ಪ್ರಮಾಣ: ಬಿಹಾರ ಶೇ.40.8, ತ್ರಿಪುರಾ ಶೇ.40.1, ಪಶ್ಚಿಮ ಬಂಗಾಳ ಶೇ.41.6 ರಷ್ಟಿದೆ, ಕರ್ನಾಟಕ ಶೇ. 21.3, ಅಸ್ಸಾಂ ಶೇ.31.8, ಆಂಧ್ರಪ್ರದೇಶ ಶೇ. 29.3, ಗುಜರಾತ್ ಶೇ. 21.8, ಮಹಾರಾಷ್ಟ್ರ ಶೇ. 21.9, ತೆಲಂಗಾಣ ಶೇ. 23.5 ಹಾಗೂ ದಾದ್ರ ಮತ್ತು ನಾಗರ್ ಹಾವೇಲಿ ಹಾಗೂ ದಿಯು-ದಮನ್ನಲ್ಲಿ ಶೇ. 26.4 ನಲ್ಲಿಯೂ ಬಾಲ್ಯವಿವಾಹದ ಪ್ರಕರಣಗಳು ದಾಖಲಾಗಿವೆ.