Job Description: * ಪ್ರಸ್ತುತ ಇಂಗ್ಲೆಂಡ್ ನ ಪುರುಷ ಹಾಗೂ ಮಹಿಳಾ ತಂಡಗಳು ಮುಂದಿನ ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಬೇಕಾಗಿತ್ತು, ಆದರೆ ಇದೀಗ ಇಂಗ್ಲೆಂಡ್ ನ ಪುರುಷ ಹಾಗೂ ಮಹಿಳಾ ತಂಡಗಳು ಭದ್ರತೆ ಕಾರಣವನ್ನು ನೀಡಿ ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಸರಣಿಯ ಪ್ರವಾಸವನ್ನು ರದ್ದು ಪಡಿಸಿವೆ. * ಪ್ರಸ್ತುತ ಕ್ರಿಕೆಟ್ ಆಟಗಾರರು ಮತ್ತು ಸಿಬ್ಬಂದಿಗಳ ಯೋಗಕ್ಷೇಮದ ಕಾರಣದಿಂದಾಗಿ ಪಾಕಿಸ್ತಾನದ ಪ್ರವಾಸ ರದ್ಧು ಮಾಡಲಾಗಿದೆ ಎಂದು ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ(ECB) ತಿಳಿಸಿದೆ. * ನ್ಯೂಜಿಲ್ಯಾಂಡ್ ತಂಡವು ಕೆಲದಿನಗಳ ಹಿಂದೆ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು, ಆದರೆ ಅಲ್ಲಿ ಮೊದಲ ಏಕದಿನ ಪಂದ್ಯ ಆರಂಭವಾಗುವ ಕೆಲ ಹೊತ್ತಿನಲ್ಲೇ ನ್ಯೂಜಿಲ್ಯಾಂಡ್ ತಂಡವು ಭದ್ರತೆ ಕಾರಣ ನೀಡಿ ಸರಣಿ ರದ್ಧು ಪಡಿಸಿದೆ.