Job Description: * ಇತ್ತೀಚಿಗೆ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ನೇತೃತ್ವದ ಸರಕಾರವನ್ನು ರಚಿಸಿವೆ, ಇದೀಗ ಅಲ್ಲಿನ ಸರ್ಕಾರಿ ವಿಶ್ವವಿದ್ಯಾಲಯದ ಹೆಸರನ್ನು ಕಾಬುಲ್ ಶಿಕ್ಷಣ ವಿಶ್ವವಿದ್ಯಾನಿಲಯ ಎಂದು ಬದಲಾವಣೆ ಮಾಡಿದೆ ಎಂದು ತಿಳಿದು ಬಂದಿದೆ. * ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಹಮಿದ್ ಕರ್ಝಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಕಾಬುಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಾವಣೆ ಮಾಡಿದ್ದಾರೆ. * ಈ ಮೊದಲು ಆ ಸರ್ಕಾರಿ ವಿಶ್ವವಿದ್ಯಾಲಯಕ್ಕೆ ಬರ್ಹಾನುದ್ದೀನ್ ರಬ್ಬಾನಿ ವಿಶ್ವವಿದ್ಯಾನಿಲಯ ಎಂಬ ಹೆಸರಿತ್ತು, ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಬುರ್ಹನುದ್ದೀನ್ ರಬ್ಬಾನಿ ಅವರ ಹೆಸರನ್ನು ಅಲ್ಲಿನ ಸರ್ಕಾರಿ ವಿಶ್ವವಿದ್ಯಾಲಯಕ್ಕೆ ಇಡಲಾಗಿತ್ತು. * ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಬುರ್ಹನುದ್ದೀನ್ ರಬ್ಬಾನಿ ಅವರು 2009 ರಲ್ಲಿ ತನ್ನ ಮನೆಯಲ್ಲಿ ಆತ್ಮಹತ್ಯೆ ದಾಳಿಯಲ್ಲಿ ಮೃತರಾಗಿದ್ದರು.