Job Description: * ಪ್ರಸ್ತುತ 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಾಹಿತಿಯಾಗಿರುವ ಎಂ.ವೀರಪ್ಪ ಮೊಯಿಲಿಗೆ ಪ್ರದಾನ ಮಾಡಲಾಗಿದೆ. * ಎಂ. ವೀರಪ್ಪ ಮೊಯಿಲಿ ಅವರ ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ ಕೃತಿಗೆ ಈ ಕೇಂದ್ರ ಸಾಹಿತ್ಯ ಪ್ರಶಸ್ತಿ ಲಭಿಸಿದೆ, ಈ ಪ್ರಶಸ್ತಿಯನ್ನು ದೆಹಲಿಯ ಕಾರ್ಯಕ್ರಮದಲ್ಲಿ ವೀರಪ್ಪ ಮೊಯಿಲಿ ಅವರಿಗೆ ಪ್ರದಾನ ಮಾಡಲಾಗಿದೆ. * ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಪ್ರೊ. ಚಂದ್ರಶೇಖರ್ ಕಂಬಾರ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು, ಈ ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಬಹುಮಾನ ಹಾಗೂ ಸವಿನೆನಪಿನ ಕಾಣಿಕೆಯನ್ನು ಕೂಡ ಒಳಗೊಂಡಿದೆ.