Job Description: * ಪ್ರಸ್ತುತ ಇ-ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥೆಯು ಭಾರತದಲ್ಲಿ ಮಾರಾಟಗಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ ಮತ್ತೇ ಮೂರು(3) ಪ್ರಾದೇಶಿಕ ಭಾಷೆಗಳಲ್ಲಿ ವ್ಯವಹರಿಸಲು ಅವಕಾಶ ನೀಡಿದೆ. * ಅಮೆಜಾನ್ ಸಂಸ್ಥೆಯು ಭಾರತದಲ್ಲಿ ಮಲಯಾಳಂ, ತೆಲುಗು, ಮತ್ತು ಬಂಗಾಳಿ ಭಾಷೆಗಳಲ್ಲಿ ಮಾರಾಟಗಾರ ಹಾಗೂ ಗ್ರಾಹಕರು ವ್ಯವಹಾರ ನಡೆಸಲು ಸಹಾಯವಾಗಲಿದೆ ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ. * ಅಮೆಜಾನ್ ಸಂಸ್ಥೆಯು ಈ ಮುಂಚೇ ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್, ಮರಾಠಿ ಭಾಷೆಗಳಲ್ಲಿ ವ್ಯವಹಾರ ನಡೆಸಲು ಮಾರಾಟಗಾರರು ಹಾಗೂ ಗ್ರಾಹಕರಿಗೆ ಅನುಕೂಲವನ್ನು ನೀಡಿತ್ತು. * ಸದ್ಯ ಅಮೆಜಾನ್ನಲ್ಲಿ ವ್ಯವಹರಿಸಲು ಒಟ್ಟಾರೆ 8 ಭಾಷೆಗಳು ಲಭ್ಯವಿವೆ ಎಂದು ಅಮೆಜಾನ್ ಇಂಡಿಯಾ ತಿಳಿಸಿದೆ, ಪ್ರಸ್ತುತ ಭಾರತದ 8.5 ಲಕ್ಷ ಮಾರಾಟಗಾರರು ಅಮೆಜಾನ್ ಇಂಡಿಯಾದಲ್ಲಿ ತಮ್ಮ ಹೆಸರುಗಳನ್ನೂ ನೋಂದಾಯಿಸಿದ್ದಾರೆ. * Amazon.com ಒಂದು ಅಮೇರಿಕನ್ ಬಹುರಾಷ್ಟ್ರೀಯ ಸಮೂಹವಾಗಿದೆ, ಇದು ಇ-ಕಾಮರ್ಸ್, ಕ್ಲೌಡ್ ಕಂಪ್ಯೂಟಿಂಗ್, ಡಿಜಿಟಲ್ ಸ್ಟ್ರೀಮಿಂಗ್ ಮತ್ತು ಕೃತಕ ಬುದ್ಧಿಮತ್ತೆಯ ಮೇಲೆ ಕೇಂದ್ರೀಕರಿಸುತ್ತದೆ. * ಪ್ರಸ್ತುತ ಅಮೆಜಾನ್ CEO: ಆಂಡಿ ಜಾಸ್ಸಿ, ಸ್ಥಾಪಕ: ಜೆಫ್ ಬೆಜೋಸ್ * ಅಮೆಜಾನ್ ಕಂಪನಿಯು 1994 ರ ಜುಲೈ.5 ರಂದು ಸ್ಥಾಪನೆಯಾಗಿದೆ, ಹಾಗೂ ಇದು ತನ್ನ ಪ್ರಧಾನ ಕಚೇರಿಯನ್ನು ಯುನೈಟೆಡ್ ಸ್ಟೇಟ್ಸ್, ವಾಷಿಂಗ್ಟನ್, ಸಿಯಾಟಲ್ ಎಂಬ ನಗರದಲ್ಲಿ ಹೊಂದಿದೆ.