Job Description: * ಪ್ರಧಾನಿ ನರೇಂದ್ರ ಮೋದಿ ಅವರು ಹಲವು ವರ್ಷಗಳಿಂದ ತಾವು ಪಡೆದುಕೊಂಡಿರುವ ಉಡುಗೊರೆಗಳು ಹಾಗೂ ಸವಿನೆನಪಿನ ಕಾಣಿಕೆಗಳನ್ನು ಹರಾಜು ಪ್ರಕ್ರಿಯೆ ಆರಂಭವಾಗಲಿದೆ, ಈ ಪ್ರಕ್ರಿಯೆಯಲ್ಲಿ ಜನಗಳು ಭಾಗವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. * ಈ ಹರಾಜು ಪ್ರಕ್ರಿಯಿಂದ ಬರುವ ಹಣ "ನವಾಮಿ ಗಂಗೆ' ಯೋಜನೆಗೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ, ಈ ನವಾಮಿ ಗಂಗೆ ಯೋಜನೆಯು ಗಂಗಾ ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನದ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. * ಪ್ರಧಾನಿ ಅವರು ಇಲ್ಲಿಯವರೆಗೆ ಹಲವಾರು ಉಡುಗೊರೆ ಹಾಗೂ ಕಾಣಿಕೆಗಳನ್ನು ಪಡೆದಿದ್ದಾರೆ, ಹಾಗೂ ಈ ಹರಾಜು ಪ್ರಕ್ರಿಯೆಯಲ್ಲಿ ಒಲಿಂಪಿಕ್ ವಿಜೇತರು ನೀಡಿದ ವಿಶೇಷ ಕಾಣಿಕೆಗಳನ್ನು ಸಹ ಹರಾಜಿಗಿಡಲಾಗಿದೆ ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಮೋದಿ ಅವರು ಮನವಿ ಮಾಡಿಕೊಂಡಿದ್ದಾರೆ.