Job Description: * ಪ್ರಸ್ತುತ ಈ ಹಿಂದಿನ ವರ್ಷ ಅಂದರೆ 2020 ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಿಂದ 1.20 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮಾಹಿತಿ ನೀಡಿದೆ, 2020 ರಲ್ಲಿ ಪ್ರತಿ ದಿನ ಸರಾಸರಿ 328 ಜನರು ತಮ್ಮ ಪ್ರಾಣವನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದಾರೆ. * ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ನ ವಾರ್ಷಿಕ 'ಕ್ರೈಮ್ ಇಂಡಿಯಾ' ವರದಿ ಮಾಡಿರುವ ಪ್ರಕಾರ ಈ ಹಿಂದಿನ 3 ವರ್ಷಗಳಲ್ಲಿ ರಸ್ತೆ ಅಪಘಾತದಿಂದಾಗಿ 3.92 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. * ಪ್ರಸ್ತುತ 2020 ರಲ್ಲಿ 41,196 ಹಿಟ್ ಅಂಡ್ ರನ್ ಪ್ರಕರಣಗಳು ದಾಖಲಾಗಿವೆ, ಎಂದು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್ಸಿಆರ್ಬಿ ವರದಿ ಮಾಡಿದೆ. * 2020 ನೇ ವರ್ಷದ ರೈಲು ಅಪಘಾತಗಳಲ್ಲಿ 52 ಸಾವು ಪ್ರಕರಣಗಳು, ಹಾಗೂ ಭಾರತದಲ್ಲಿ ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ 133 ಸಾವು ಪ್ರಕರಣಗಳು ದಾಖಲಾಗಿವೆ.