Job Description: * ಮೊದಲ ಬಾರಿಗೆ ರೈಲಿನಿಂದ ಖಂಡಾಂತರ ಕ್ಷಿಪಣಿಗಳನ್ನು ಉತ್ತರ ಕೊರಿಯಾ ಯಶಸ್ವಿಯಾಗಿ ಉಡಾವಣೆ ಮಾಡಿದೆ. * ಉತ್ತರ ಕೊರಿಯಾ ರಾಷ್ಟ್ರವು ತನ್ನ ಮಿಲಿಟರಿ ಸಾಮರ್ಥ್ಯ ಪ್ರದರ್ಶನದ ಅಂಗವಾಗಿ ಇತ್ತೀಚಿಗೆ ಎರಡು ಖಂಡಾಂತರ ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ. * ಉತ್ತರ ಕೊರಿಯಾ ರಾಷ್ಟ್ರವು ತನ್ನ ದೇಶದ ಪರ್ವತಗಳ ಮಧ್ಯ ಇರುವ ಪ್ರದೇಶದಲ್ಲಿ ರೈಲು ಹಳಿಗಳನ್ನೂ ಹೊಂದಿದೆ, ಹಾಗೂ ಅಲ್ಲಿನ ರೈಲುಗಳ ಮೇಲೆ ನಿರ್ಮಾಣ ಮಾಡಲಾಗಿರುವ ಲಾಂಚರ್'ಗಳಿಂದ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ, ಈ ಕ್ಷಿಪಣಿಯ 800 ಕಿ.ಮೀ ದೂರದಲ್ಲಿರುವ ಸಮುದ್ರದ ಗುರಿಯನ್ನು ನಿಖರವಾಗಿ ಹೊಡೆದಉರುಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪಯೋಂಗ್ಯಾಂಗ್ನ ಅಧಿಕೃತ ಸೆಂಟ್ರಲ್ ನ್ಯೂಸ್ ಮಾಹಿತಿಯನ್ನು ಪ್ರಕಟಿಸಿದೆ, ಅಲ್ಲದೇ ಉತ್ತರ ಕೊರಿಯಾ ಸರ್ಕಾರಿ ಮಾಧ್ಯಮಗಳು ಮಾಹಿತಿ ನೀಡಿವೆ.