Job Description: * ಪ್ರಸ್ತುತ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ದೇಶಗಳು ಹಿಂದೂ ಮಹಾಸಾಗರ- ಪೆಸಿಫಿಕ್ ಪ್ರದೇಶದಲ್ಲಿ ತಮ್ಮ ಹಿತಾಸಕ್ತಿ ಕಾಯ್ದುರಿಸಿಕೊಳ್ಳಲು 'ಔಕಸ್'(AUKUS) ಎಂಬ ಹೊಸ ತ್ರಿಪಕ್ಷೀಯ ಭದ್ರತಾ ಮೈತ್ರಿಕೂಟವನ್ನು ಘೋಷಣೆ ಮಾಡಿವೆ. * ಈ ಮೈತ್ರಿಯಿಂದಾಗಿ ಹಿಂದೂ ಮಹಾಸಾಗರ- ಪೆಸಿಫಿಕ್ ಪ್ರದೇಶದಲ್ಲಿ ರಕ್ಷಣೆ, ಪರಮಾಣು- ಚಾಲಿತ ಜಲಾಂತರ್ಗಾಮಿಗಳ ಅಭಿವೃದ್ಧಿಪಡಿಸಿಕೊಳ್ಳಲು ಹಾಗೂ ರಕ್ಷಣಾ ಸಾಮರ್ಥ್ಯಗಳನ್ನು ಹಂಚಿಕೊಳ್ಳುವ ಅವಕಾಶಗಳನ್ನು ಆಸ್ಟ್ರೇಲಿಯಾಗೆ ನೀಡಲಿದೆ. * ಪ್ರಸ್ತುತ ಹಿಂದೂ ಮಹಾಸಾಗರ- ಪೆಸಿಫಿಕ್ ಪ್ರದೇಶದಲ್ಲಿ ಚೀನಾ ದೇಶದ ಪ್ರಭಾವ ಹೆಚ್ಚುತ್ತಿರುವ ಹಿನ್ನಲೆಯಿಂದಾಗಿ ಈ ಮೂರು ರಾಷ್ಟ್ರಗಳು ಈ ಹೊಸ 'ಔಕಸ್' ಎಂಬ ಮೈತ್ರಿ ಮಾಡಿಕೊಂಡಿವೆ. * ಈ ಹೊಸ 'ಔಕಸ್' ಎಂಬ ಮೈತ್ರಿ ಅಡಿಯಲ್ಲಿ ಮೂರು ರಾಷ್ಟ್ರಗಳು ಭದ್ರತೆ ಮತ್ತು ರಕ್ಷಣಾ, ವಿಜ್ಞಾನ, ತಂತ್ರಜ್ಞಾನ, ಕೈಗಾರಿಕಾ ನೆಲೆಗಳಿಗೆ ಪರಸ್ಪರ ಸಹಕಾರ ನೀಡಲಿವೆ ಎಂದು ತಿಳಿಸಿದ್ದಾರೆ. * ಅಮೆರಿಕ ಮತ್ತು ಬ್ರಿಟನ್ ದೇಶಗಳು ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಾಣ ಮಾಡಲು ಆಸ್ಟ್ರೇಲಿಯಾಗೆ ನೆರವು ನೀಡಲಿವೆ, ಹಾಗೂ ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆಯನ್ನು ಕಾಪಾಡುವ ಗುರಿಯನ್ನು ಈ ರಾಷ್ಟ್ರಗಳು ಹೊಂದಿದೆ.