Job Description: * ಪ್ರಸ್ತುತ ಚೀನಾದ ಮೂವರು(3) ಗಗನಾಯತ್ರಿಗಳು ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಹಾಗೂ ದುರಸ್ತಿ, ಹೀಗೆ ಹಲವು ಕಾರ್ಯಗಳಿಗಾಗಿ ಮೂರು ತಿಂಗಳು ಅಂದರೆ 90 ದಿನಗಳ ಕಾಲ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಿದ್ದರು ಇದೀಗ ಈ ಗಗನಾಯತ್ರಿಗಳು ಮರಳಿ ಭೂಮಿಯ ಕಡೆಗೆ ಹೊರಟಿದ್ದಾರೆ. * ಚೀನಾ ದೇಶದ ನೀ ಹೈಶೆಂಗ್, ಲಿಯು ಬೊಮಿಂಗ್ ಮತ್ತು ಟ್ಯಾಂಗ್ ಹಾಂಗೊ ಎಂಬ ಗಗನಯಾತ್ರಿಗಳು 90 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ನೆಲೆಸಿದ್ದರು, ಇದೀಗ ಗಗನಯಾತ್ರಿಗಳು ಶೆನ್ಶಾವ್-12 ಗಗನ ನೌಕೆ ಬಳಸಿಕೊಂಡು ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯ ಕಡೆಗೆ ಹೊರಟಿದ್ದಾರೆ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯು ಮಾಹಿತಿಯನ್ನು ನೀಡಿದೆ. * ಭೂಮಿಯ ಕಡೆಗೆ ಹೊರಟಿರುವ ಗಗನಯಾತ್ರಿಗಳ ಗಗನ ನೌಕೆಯು ಜಿಯುಕ್ವಾನ್ ಉಡಾವಣಾ ಕೇಂದ್ರದ ಸಮೀಪದಲ್ಲಿರುವ ಗೋಬಿ ಮರುಭೂಮಿಗೆ ಬಂದು ತಲುಪಲಿದೆ ಎಂದು ತಿಳಿಸಿದ್ದಾರೆ.