Job Description: * ಪ್ರಸ್ತುತ ಅಮೇರಿಕದ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯವು 1 ರೂ. ಗಿಂತಲೂ ಹೆಚ್ಚು ಕುಸಿದಿದೆ, ಅಲ್ಲದೇ ಅಂತರ ಬ್ಯಾಂಕ್ ವಹಿವಾಟಿನಲ್ಲಿ 169.9 ರೂ.ಗಳಷ್ಟಾಗಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಪಾಕಿಸ್ತಾನದ ರೂಪಾಯಿ ಮೌಲ್ಯದ ದಾಖಲೆಯ ಕುಸಿತವನ್ನು ಕಂಡಿದೆ ಎನ್ನಲಾಗಿದೆ, ಇದಕ್ಕೂ ಮೊದಲು ಅಮೇರಿಕ ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ಮೌಲ್ಯವು 168.94 ರೂ. ಗಳಷ್ಟಿತ್ತು, ಎಂದು ಈ ಮಾಹಿತಿಯನ್ನು ಪಾಕಿಸ್ತಾನದ ಎಕ್ಸ್ಚೇಂಜ್ ಕಂಪನಿಗಳ ಅಸೋಸಿಯೇಶನ್ನ ಅಧ್ಯಕ್ಷ ಮಲಿಕ್ ಬೋಸ್ತಾನ್ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. * ಪ್ರಸ್ತುತ ಪಾಕಿಸ್ತಾನ ಕರೆನ್ಸಿ, ಏಷ್ಯಾದ ಇತರೆ ಕರೆನ್ಸಿಗಳಿಗಿಂತ ಕುಸಿತವನ್ನು ಕಂಡಿದೆ, ಇದೀಗ ಪಾಕಿಸ್ತಾನ ಕರೆನ್ಸಿಯು ಅತ್ಯಂತ ಕಳಪೆ ವಹಿವಾಟಿನ ಕರೆನ್ಸಿ ಎಂದು ಘೋಷಣೆ ಮಾಡಲಾಗಿದೆ.