Job Description: * ಪ್ರಸ್ತುತ ಕೇಂದ್ರ ಸಚಿವ ಸಂಪುಟವು ಭಾರತದಲ್ಲಿನ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸಲು ವಾಹನ ಹಾಗೂ ವಾಹನದ ಬಿಡಿಭಾಗಗಳು ಮತ್ತು ಡ್ರೋನ್ ಉದ್ಯಮಕ್ಕಾಗಿ 26,058 ಕೋಟಿ ರೂ. ಪ್ಯಾಕೇಜ್'ಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. * ಭಾರತದಲ್ಲಿ ಸುಧಾರಿತ ಆಟೋಮೋಟಿವ್ ತಂತ್ರಜ್ಞಾನಗಳ ಜಾಗತಿಕ ಪೂರೈಕೆಯನ್ನು ಉತ್ತೇಜಿಸಲು ಉತ್ಪಾದನೆ ಪ್ರೋತ್ಸಾಹಕ ಯೋಜನೆಯು ಸಹಾಯ ಮಾಡಲಿದೆ, ಇದು 7.6 ಲಕ್ಷಕ್ಕೂ ಹೆಚ್ಚಿನ ಉದ್ಯೋಗವನ್ನು ಸೃಷ್ಟಿ ಮಾಡಲಿದೆ ಎಂದಿದ್ದಾರೆ. * ಈ 26,058 ಕೋಟಿ ರೂ. ಪ್ರೋತ್ಸಾಹ ಧನವನ್ನು ಮುಂದಿನ '5' ವರ್ಷಗಳಲ್ಲಿ ಉದ್ಯಮಕ್ಕೆ ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.