Job Description: * ಪ್ರಸ್ತುತ ಅಮೆರಿಕದ ಮೂವರು ಮಾಜಿ ಅಧ್ಯಕ್ಷರು, ರಿಪಬ್ಲಿಕನ್ ಪಕ್ಷದ ಜಾರ್ಜ್ ಬುಷ್, ಹಾಗೂ ಡೆಮೊಕ್ರೆಟಿಕ್ ಪಕ್ಷದ ಬಿಲ್ ಕ್ಲಿಂಟನ್ ಮತ್ತು ಬರಾಕ್ ಒಬಾಮ ಅಮೇರಿಕಕ್ಕೆ ಆಗಮಿಸಿರುವ ಅಫ್ಗಾನಿಸ್ತಾನದ ನಿರಾಶ್ರಿತ ಪ್ರಜೆಗಳಿಗೆ ನೆಲೆಯನ್ನು ನೀಡುವ ನಿಟ್ಟಿನಲ್ಲಿ ಒಂದಾಗಿದ್ದಾರೆ. * ಪ್ರಸ್ತುತ ಅಫ್ಘಾನಿಸ್ತಾನದ ನಿರಾಶ್ರಿತ ಪ್ರಜೆಗಳಿಗೆ ದಾನ ನೀಡಲು ಅಮೇರಿಕದ ಪ್ರಜೆಗಳು ವೆಬ್ಸೈಟ್ ನ್ನು ಆರಂಭಿಸಿದ್ದಾರೆ ಎಂದು 'ರಾಯಿಟರ್ಸ್' ಮಾಹಿತಿಯನ್ನು ಪ್ರಕಟಿಸಿದೆ. * ಮಾಜಿ ಅಧ್ಯಕ್ಷರು ಮತ್ತು ಅವರ ಪತ್ನಿಯರು ವೆಲ್ಕಮ್ US, ತಂಡಗಳು, ಅಮೆರಿಕದ ಉದ್ಯಮಿಗಳು ಹಾಗೂ ಇನ್ನು ಅನೇಕ ಸಂಘಸಂಸ್ಥೆಗಳ ನಾಯಕರ ಜೊತೆ ಕೆಲಸ ಮಾಡಲಿದ್ದಾರೆ, ಅಲ್ಲದೇ ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್ ಗವರ್ನರ್ಗಳು ಇದಕ್ಕೆ ಸಹಿ ಸಮ್ಮತಿಯನ್ನು ನೀಡಿದ್ದಾರೆ.