Job Description: * ಪ್ರತಿ ವರ್ಷವು ಸೆಪ್ಟೆಂಬರ್. 15 ರಂದು ಸರ್ ಎಮ್. ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದ ನೆನಪಿಗಾಗಿ ಇಂಜಿನಿಯರ್ಸ್ (Engineers) ದಿನ ಆಚರಣೆ ಮಾಡಲಾಗುತ್ತದೆ. * ಇಂಜಿನಿಯರಿಂಗ್ ದಿನದಂದು ಎಂಜಿನಿಯರಿಂಗ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರ ಕೊಡುಗೆಗಳನ್ನು ನೆನಪಿಸಿಕೊಳ್ಳಲಾಗುತ್ತದೆ ಹಾಗೂ ಯುವ ಪ್ರತಿಭೆಗಳಿಗೆ ತಿಳಿಸಲಾಗುತ್ತದೆ. * ಸರ್ ಎಂ. ವಿಶ್ವೇಶ್ವರಯ್ಯನವರು ಭಾರತದಾದ್ಯಂತ ಅಣೆಕಟ್ಟುಗಳು, ಜಲಾಶಯಗಳು ಮತ್ತು ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. * ಈ ಹಿಂದೆ ಸರ್ ಎಂ. ವಿಶ್ವೇಶ್ವರಯ್ಯನವರು 1903 ರಲ್ಲಿ ಪುಣೆಯ ಖಡಕ್ವಾಸ್ಲಾ ಜಲಾಶಯದಲ್ಲಿ 'ಸ್ವಯಂಚಾಲಿತ ತಡೆ ವಾಟರ್ ಫ್ಲಡ್ಗೇಟ್ಗಳನ್ನು' ವಿನ್ಯಾಸಗೊಳಿಸಿ ಸ್ಥಾಪನೆ ಮಾಡಿದ್ದಾರೆ. * ಪ್ರಸ್ತುತ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಭಾರತ, ಶ್ರೀಲಂಕಾ ಹಾಗೂ ಟಾಂಜಾನಿಯಾದಲ್ಲಿ ಎಂಜಿನಿಯರ್ ದಿನವನ್ನಾಗಿ ಆಚರಣೆ ಮಾಡುತ್ತಾರೆ. * ಸರ್ ಎಂ ವಿಶ್ವೇಶ್ವರಯ್ಯನವರು ಭಾರತೀಯ ಸಿವಿಲ್ ಎಂಜಿನಿಯರ್ ಹಾಗೂ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ, ಇವರು ಮೈಸೂರು ಸಂಸ್ಥಾನದ 19 ನೇ ದಿವಾನರಾಗಿ ಕಾರ್ಯ ನಿರ್ವಹಿಸಿದ್ದಾರೆ, ಇವರು 1955 ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.