Job Description: * ಪ್ರಸ್ತುತ ಭಾರತ ಮತ್ತು ಚಿಲಿ ದೇಶಗಳ ನಡುವೆ 7 ನೇ ವಿದೇಶಾಂಗ ಕಚೇರಿ ಸಮಾಲೋಚನೆಗಳು ಸ್ಯಾಂಟಿಯಾಗೊದಲ್ಲಿ ಜರುಗಿತು. * ಭಾರತವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರಿವಾ ಗಂಗೂಲಿ ದಾಸ್, ಹಾಗೂ ಚಿಲಿ ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಪ ಮಂತ್ರಿ ಶ್ರೀಮತಿ ಕೆರೊಲಿನಾ ವಾಲ್ಡಿವಿಯಾ ಟೊರೆಸ್ ಭಾಗವಹಿಸಿದ್ದರು. * ಪ್ರಸ್ತುತ ಎರಡು ದೇಶಗಳ ವ್ಯಾಪಾರ ಹಾಗೂ ಹೂಡಿಕೆಗಳು, ಕೃಷಿ, ರಕ್ಷಣೆ, ಆರೋಗ್ಯ ಮತ್ತು ಔಷಧಗಳು, ಜಾಗ, ಶಕ್ತಿ, ವಿಪತ್ತು ನಿರ್ವಹಣೆ, ಹಾಗೂ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಈ ಸಮಾಲೋಚನೆಯಲ್ಲಿ ಪರಿಶೀಲನೇ ಮಾಡಿಕೊಂಡರು. * ಈ ಹಿಂದೆ 2006 ರಲ್ಲಿ ಆದ್ಯತೆಯ ವ್ಯಾಪಾರ ಒಪ್ಪಂದಕ್ಕೆ ಭಾರತ ನತ್ತು ಚಿಲಿ ದೇಶಗಳು ಸಹಿ ಹಾಕಿದ್ದವು, ಮತ್ತೆ ಇದನ್ನು 2017 ರಲ್ಲಿ ವಿಸ್ತರಿಸಲಾಗಿತ್ತು. * ಪ್ರಸ್ತುತ ಚಿಲಿ ಲ್ಯಾಟಿನ್ ಅಮೇರಿಕಾ ಹಾಗೂ ಭಾರತಕ್ಕಾಗಿ ಪೆಸಿಫಿಕ್ ಅಲೈಯನ್ಸ್ಗೆ ದಾರಿದೀಪವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ, ಅಲ್ಲದೇ ಭಾರತದ 5 ನೇ ಅತಿದೊಡ್ಡ ವ್ಯಾಪಾರ ಪಾಲುದಾರವನ್ನು ಲ್ಯಾಟಿನ್ ಅಮೇರಿಕನ್ ಪ್ರದೇಶದಲ್ಲಿ ಹೊಂದಿದೆ. * ಅಂತರಾಷ್ಟ್ರೀಯ ಸೌರ ಒಕ್ಕೂಟದಲ್ಲಿ ಭಾರತ ಮತ್ತು ಚಿಲಿ ದೇಶಗಳು ಪಾಲುದಾರರಾಗಿದ್ದಾರೆ.