Job Description: * ಪ್ರಸ್ತುತ 17 ನೇ ಭಾರತ- ಅಮೇರಿಕ ಆರ್ಥಿಕ ಶೃಂಗಸಭೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರು ಮಾತನಾಡಿದರು, ಕಳೆದ ಎರಡು ದಶಕಗಳಲ್ಲಿ ಭಾರತ ಹಾಗೂ ಅಮೇರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರವು 16 ಬಿಲಿಯನ್ ಡಾಲರ್ನಿಂದ 149 ಬಿಲಿಯನ್ ಡಾಲರ್ಗಳಿಗೆ ಏರಿಕೆಯಾಗಿದೆ, ಹಾಗೂ ಇದು ಮುಂಬರುವ 2025 ರ ವೇಳೆಗೆ 500 ಬಿಲಿಯನ್ ಡಾಲರ್ಗಳಿಗೆ ಏರಿಕೆಯಾಗುವ ನಿರೀಕ್ಷೆಗಳಿವೆ ಎಂದು ತಿಳಿಸಿದ್ದಾರೆ. * ಭಾರತದಾದ್ಯಂತ ರಸ್ತೆ ಮತ್ತು ಹೆದ್ದಾರಿ ಯೋಜನೆಗಳಲ್ಲಿ ಎಲ್ಲ ಅಮೇರಿಕನ್ ಹೂಡಿಕೆದಾರರಿಗೆ ವಿಶೇಷವಾಗಿ ವಿಮೆ ಮತ್ತು ಪಿಂಚಣಿ ನಿಧಿಯನ್ನು ಭಾರತದ ರಸ್ತೆ ಮತ್ತು ಹೆದ್ದಾರಿ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿದ್ದಾರೆ. * 17 ನೇ ಭಾರತ-ಯುಎಸ್ ಆರ್ಥಿಕ ಶೃಂಗಸಭೆಯನ್ನು ಇಂಡೋ-ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದೆ. * ಇಂಡೋ-ಅಮೇರಿಕನ್ ಚೇಂಬರ್ ಆಫ್ ಕಾಮರ್ಸ್ (IACC) ಯನ್ನು 1968 ರಲ್ಲಿ ಸ್ಥಾಪನೆ ಮಾಡಲಾಗಿದೆ, ಹಾಗೂ ಇದು ಭಾರತ-ಅಮೇರಿಕದ ದ್ವಿಪಕ್ಷೀಯ ಕೊಠಡಿಯಾಗಿದೆ, ಅಲ್ಲದೇ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಉತ್ತೇಜನ ನೀಡುತ್ತದೆ.