Job Description: * ಪ್ರಸ್ತುತ ಭಾರತೀಯ ವಾಯುಪಡೆಯು ಕಾಶ್ಮೀರದ ಯುವಕರನ್ನು ಸೇನೆಗೆ ಸೇರಲು ಪ್ರೇರೇಪಿಸುವ ಹಾಗೂ ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸೆ.26 ರಂದು ಇಲ್ಲಿನ ಪ್ರಸಿದ್ಧ ದಾಲ್ ಸರೋವರದ ಮೇಲೆ ಏರ್ ಶೋ ನಡೆಸಲಿದೆ ಎಂದು ವಾಯುಪಡೆಯು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಪ್ರಸ್ತುತ ಶ್ರೀನಗರದ ದಾಲ್ ಸರೋವರದ ಮೇಲೆ ನಡೆಯುವ ಏರ್ ಶೋ ಪ್ರದರ್ಶನದಲ್ಲಿ 3,000 ಕ್ಕೂ ಅಧಿಕ ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. * ಭಾರತೀಯ ವಾಯುಪಡೆಯು ಆಜಾದ ಕಾ ಅಮೃತ್ ಮಹೋತ್ಸವ ಆಚರಣೆಯ ಅಂಗವಾಗಿ ನಡೆಸುತ್ತಿರುವ ಈ ಏರ್ ಶೋ ಗೆ ವಿದ್ಯಾರ್ಥಿಗಳನ್ನು ಕರೆತರಲು ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.