Job Description: * ಪ್ರಧಾನಮಂತ್ರಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ ಭವನದ ಅನುಬಂಧದ ಮುಖ್ಯ ಸಮಿತಿ ಕೊಠಡಿಯಲ್ಲಿ 'ಸಂಸದ್ ಟಿವಿ'ಗೆ ಚಾಲನೆ ನೀಡಿದರು, ಈ ಟಿವಿ ಚಾನೆಲ್ OTT, ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿದೆ, ಹಾಗೂ ಇದು ಆಪ್ ಸಹ ಹೊಂದಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಈ ಸಂಸದ್ ಟಿವಿ ಕ್ರಾಯಕ್ರಮವು ಪ್ರಾಥಮಿಕವಾಗಿ '4' ವಿಭಾಗಗಳಲ್ಲಿ ಇರಲಿದೆ: - ಸಂಸತ್ತು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಕಾರ್ಯನಿರ್ವಹಣೆ, - ಯೋಜನೆಗಳು, ನೀತಿಗಳ ಆಡಳಿತ ಮತ್ತು ಅನುಷ್ಠಾನ, - ಭಾರತದ ಇತಿಹಾಸ, - ಸಂಸ್ಕೃತಿ ಮತ್ತು ಸಮಕಾಲೀನ ಸ್ವರೂಪದ ಸಮಸ್ಯೆಗಳು, ಹಿತಾಸಕ್ತಿಗಳು, ಹಾಗೂ ಕಾಳಜಿಗಳು.