Job Description: * ಪ್ರಸ್ತುತ ಅಮೇರಿಕದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜಸ್ಕರನ್ ಮಲ್ಹೋತ್ರಾ ಅವರು ಏಕದಿನ ಕ್ರಿಕೆಟ್ನ ಒಂದು ಓವರ್ ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್'ಗಳನ್ನೂ ಬಾರಿಸಿದ್ದಾರೆ. * ಈ ಪಂದ್ಯವು ಪಪುವಾ ನ್ಯೂ ಗಿನಿ ವಿರುದ್ಧ ನಡೆದ ಏಕದಿನ ಪಂದ್ಯವಾಗಿದೆ, ಇದಲ್ಲದೇ ಒಂದೇ ಓವರ್'ನಲ್ಲಿ 6 ಸಿಕ್ಸರ್ ಸಿಡಿಸಿದ 2ನೇ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಇವರಾಗಿದ್ದಾರೆ. * ಅಮೆರಿಕದ ಮೊದಲ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರುವ ಜಸ್ಕರನ್ ಮಲ್ಹೋತ್ರಾ ಅವರು ಏಕದಿನ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಎಂಬ ಹೆಗ್ಗಳಿಕೆ ಇವರದಾಗಿದೆ. * ಜಸ್ಕರನ್ ಮಲ್ಹೋತ್ರಾ ಅವರು 124 ಎಸೆತಗಳಲ್ಲಿ 4 ಬೌಂಡರಿ ಹಾಗೂ 16 ಸಿಕ್ಸರ್ ನೆರವಿನಿಂದ 173 ರನ್ ಕಲೆಹಾಕಿ ಅಜೇಯರಾಗಿದ್ದಾರೆ. * ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹರ್ಷಲ್ ಗಿಬ್ಸ್ ಅವರು 2007ರ ವಿಶ್ವಕಪ್ನಲ್ಲಿ ನೆದರ್ಲೆಂಡ್ ವಿರುದ್ಧ ಒಂದೇ ಓವರ್'ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಗಳನ್ನೂ ಬಾರಿಸಿ ದಾಖಲೆಯುನ್ನು ನಿರ್ಮಿಸಿದ್ದಾರೆ.