Job Description: * ಪ್ರಸ್ತುತ ಪಾಕಿಸ್ತಾನದ ಅಂತಾರಾಷ್ಟ್ರೀಯ ಏರ್ ಲೈನ್ಸ್ (PIA) ಇಸ್ಲಾಮಾಬಾದ್ ನಿಂದ ಕಾಬೂಲ್'ಗೆ ವಾಣಿಜ್ಯ ವಿಮಾನ ಸೇವೆಯನ್ನು ಆರಂಭಿಸಲಿದೆ ಎಂದು ತಿಳಿದು ಬಂದಿದೆ. * ಇತ್ತೀಚಿಗೆ ಆಫ್ಘಾನಿಸ್ತಾನ್ ರಾಷ್ಟ್ರವು ತಾಲಿಬಾನಿಗಳ ವಶವಾದ ನಂತರ ಪಾಕಿಸ್ತಾನ ಈ ಸೇವೆಯನ್ನು ಆರಂಭಿಸಲಿದೆ ಎಂದು ತಿಳಿದು ಬಂದಿದೆ. * ಸದ್ಯ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪುನಆರಂಭಿಸಲು ತಾಲೀಬಾನಿಗಳು ಕತಾರಿಯ ತಾಂತ್ರಿಕ ಸಹಾಯ ಪಡೆಯುತ್ತಿದ್ದಾರೆ ಎನ್ನಲಾಗಿದೆ. * ಪ್ರಸ್ತುತ ಅಫ್ಘಾನಿಸ್ತಾನದ ಕಾಬೂಲ್'ಗೆ ವಿಮಾನಗಳ ಕಾರ್ಯಾಚರಣೆ ನಡೆಸಲು ಎಲ್ಲಾ ತಾಂತ್ರಿಕ ಅನುಮತಿ ಲಾಬಿಯವಾಗಿದೆ ಎಂದು ಪಾಕಿಸ್ತಾನ ತಿಳಿಸಿದೆ, ಹಾಗೂ ಇಸ್ಲಾಮಾಬಾದ್ ನಿಂದ ಮೊದಲ ವಾಣಿಜ್ಯ ವಿಮಾನವು ಕಾಬೂಲ್'ಗೆ ತೆರಳಲಿದೆ ಎಂದು ಪಿಐಎ(PIA) ವಕ್ತಾರ ಅಬ್ದುಲ್ಲಾ ಹಫೀಜ್ ಖಾನ್ ಮಾಹಿತಿ ನೀಡಿದ್ದಾರೆ.