Job Description: * ಪ್ರಸ್ತುತ ಅಫ್ಘಾನಿಸ್ಥಾನ ನೆಲದಲ್ಲಿ ಉಗ್ರ ಚಟುವಟಿಕೆ ಮಾಡುವಂತಿಲ್ಲ, ಹಾಗೂ ಯಾವುದೇ ರೀತಿಯ ಭಯೋತ್ಪಾದನಾ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಭಾರತ ಮತ್ತು ಆಸ್ಟ್ರೇಲಿಯಾ ಜೊತೆಯಾಗಿ ತಾಲಿಬಾನ್ ಆಡಳಿತಕ್ಕೆ ಎಚ್ಚರಿಕೆ ನೀಡಿವೆ. * ಇತ್ತೀಚಿಗೆ ಆಫ್ಘಾನಿಸ್ತಾನದ ಕಾಬೂಲ್ ಪ್ರದೇಶವು ತಾಲಿಬಾನಿಗಳ ಕೈವಶವಾದ ನಂತರ ಭಾರತ ಮತ್ತು ಆಸ್ಟ್ರೇಲಿಯಾ ಉಭಯ ರಾಷ್ಟ್ರಗಳು '2 ಪ್ಲಸ್ 2' ಶೃಂಗಸಭೆಯಲ್ಲಿ ಭಾಗಿಯಾಗಿದ್ದವು, ಈ ಸಭೆಯಲ್ಲಿ ಆಸ್ಟ್ರೇಲಿಯಾದ ಮರೈಸ್ ಪೇಯ್ನ ಮತ್ತು ಪೀಟರ್ ಡಟ್ಟನ್ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣ ಸಚಿವ ರಾಜನಾಥ್ ಸಿಂಗ್ ಭಾಗಿಯಾಗಿದ್ದರು. * ಪ್ರಸ್ತುತ ಈ ರಾಷ್ಟ್ರಗಳು ಉಗ್ರ ಚಟುವಟಿಕೆಯೊಂದಿಗೆ ರಾಜಿ ಮಾಡಿಕೊಳ್ಳುವಂತಿಲ್ಲ, ಅಲ್ಲದೇ 'ಯುಎನ್ಎಸ್ಸಿ ರೆಸಲ್ಯೂಷನ್ 2593 ಮಾರ್ಗದರ್ಶನದ ಅಡಿಯಲ್ಲಿ ಉಗ್ರ ಚಟುವಟಿಕೆಗಳ ನಿಯಂತ್ರಣಕ್ಕೆ ಜಾಗತಿಕ ಸಮುದಾಯ ಒಗ್ಗಟ್ಟಾಗಿ ನಿಲ್ಲಬೇಕು ಎಂದು ತಿಳಿಸಿದ್ದಾರೆ, ಹಾಗೂ ಈ ರಾಷ್ಟ್ರಗಳು ಪರಸ್ಪರ ರಕ್ಷಣ, ವಾಣಿಜ್ಯ ಒಪ್ಪಂದಗಳಿಗೆ ಬದ್ಧವಾಗಿರಬೇಕು ಎಂದು ತಿಳಿಸಿವೆ.