Job Description: * ಭಾರತೀಯ ರೈಲ್ವೆ ಎಸಿ 3-ಶ್ರೇಣಿಯ ರೈಲುಗಳಲ್ಲಿ ಹೊಸ ಆರ್ಥಿಕ(economy)ಕೋಚ್ಗಳನ್ನು ಪರಿಚಯಿಸಿದೆ, ಈ ಹೊಸ ಬೋಗಿಗಳಿಂದ ರೈಲುಗಳಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ನೀಡಲಾಗುತ್ತದೆ. * ಹೊಸ ಕೋಚ್ಗಳಿಗೆ ಟಿಕೆಟ್ ದರವು ಸಾಮಾನ್ಯ ಎಸಿ 3-ಶ್ರೇಣಿ ಕೋಚ್ ದರಕ್ಕಿಂತಲೂ ಶೇ. 8 ರಷ್ಟು ಕಡಿಮೆ ಇರಲಿದೆ ಎಂದು ತಿಳಿಸಿದೆ. * ಈ ರೈಲು ಸೌಲಭ್ಯವನ್ನು ಮೊದಲ ಬಾರಿಗೆ ಪ್ರಯಾಗರಾಜ್-ಜೈಪುರ ನಡುವಿನ ರೈಲುಗಳಲ್ಲಿ ಒದಗಿಸಲಾಗಿದೆ. * ಈ ಹೊಸ ಕೋಚ್ಗಳ ಟಿಕೆಟ್ ಬೆಲೆಯು ಪ್ರಸ್ತುತ ಎಕ್ಸ್ಪ್ರೆಸ್ ರೈಲುಗಳಲ್ಲಿನ ಸ್ಲೀಪರ್ ವರ್ಗದ ಮೂಲ ಬೆಲೆಗಿಂತ 2.4 ಪಟ್ಟು ಹೆಚ್ಚಿರಲಿದೆ, ಪ್ರಸ್ತುತ 2000 ಕಿ.ಮೀ. ವರೆಗೆ ಚಲಿಸುವ ರೈಲುಗಳಿಗೆ, 1757 ರೂ. ದರವನ್ನು ನಿಗದಿಪಡಿಸಿದ್ದಾರೆ, ಹಾಗೂ 5000 ಕಿ.ಮೀ. ವರೆಗೆ ಚಲಿಸುವ ರೈಲುಗಳಿಗೆ 3065 ರೂ. ದರವನ್ನು ನಿಗದಿಪಡಿಸಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. * ಭಾರತೀಯ ರೈಲ್ವೆಯು ರೈಲ್ವೇ ಸಚಿವಾಲಯದ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಶಾಸನಬದ್ಧ ಸಂಸ್ಥೆಯಾಗಿದೆ, ಹಾಗೂ ರೈಲ್ವೇ ಸಚಿವಾಲಯವು ವಿಶ್ವದ 4 ನೇ ಅತಿದೊಡ್ಡ ರೈಲ್ವೆ ಜಾಲವನ್ನು ನಿರ್ವಹಿಸುತ್ತದೆ.