Job Description: * ಪ್ರಸ್ತುತ ದೆಹಲಿ ಸರ್ಕಾರದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು 'ವ್ಯಾಪಾರ(ಬಿಸಿನೆಸ್) ಬ್ಲಾಸ್ಟರ್ಸ್' ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. * ಈ ಕಾರ್ಯಕ್ರಮವು ಉದ್ಯಮವನ್ನು ಪ್ರಾರಂಭಿಸುವ ವಿದ್ಯಾರ್ಥಿಗಳಿಗೆ ಸ್ವಲ್ಪ ಮಟ್ಟದ ಹಣವನ್ನು ನೀಡಲು ಸಿದ್ಧವಾಗಿದೆ ಇದರಿಂದಾಗಿ ಶಾಲಾ ಮಟ್ಟದಲ್ಲಿ ಯುವ ಉದ್ಯಮಿಗಳನ್ನು ಅಭಿವೃದ್ಧಿಪಡಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ. * ಈ 'ಬಿಸಿನೆಸ್ ಬ್ಲಾಸ್ಟರ್ಸ್' ಕಾರ್ಯಕ್ರಮವನ್ನು ದೆಹಲಿ ಸರ್ಕಾರಿ ಶಾಲೆಗಳಲ್ಲಿ 'ಉದ್ಯಮಶೀಲತೆ ಮೈಂಡ್ಸೆಟ್ ಪಠ್ಯಕ್ರಮ' ಅಡಿಯಲ್ಲಿ ಜಾರಿತರಲಾಗುತ್ತದೆ, ಹಾಗೂ 11 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ಉದ್ಯಮವನ್ನು ಪ್ರಾರಂಭಿಸಲು 2,000 ರೂ ಗಳ ಬೀಜದ ಹಣವನ್ನು ನೀಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ತಿಳಿಸಿದ್ದಾರೆ. * ಪ್ರಸ್ತುತ ದೆಹಲಿ ಸರ್ಕಾರವು EMC ಕಾರ್ನೀವಲ್ ನ ವಲಯ ಹಾಗೂ ಜಿಲ್ಲಾ ಮಟ್ಟದಲ್ಲಿ ಬಿಸಿನೆಸ್ ಬ್ಲಾಸ್ಟರ್ಸ್ ಗಳ 100 ಉನ್ನತ ಯೋಜನೆಗಳೊಂದಿಗೆ ಆಯೋಜಿಸಲಿದೆ ಎಂದು ತಿಳಿಸಿದ್ದಾರೆ.