Job Description: * ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇತ್ತೀಚಿಗೆ ಅಮೇರಿಕದ ಸ್ಪೈಮಾಸ್ಟರ್ ವಿಲಿಯಂ ಬರ್ನ್ಸ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ತಮ್ಮ ಸರ್ಕಾರ ಘೋಷಣೆ ಮಾಡಿದ ನಂತರ ಈ ಭೇಟಿಯು ನಡೆದಿದೆ. * ಸೆಂಟ್ರಲ್ ಇಂಟೆಲಿಜನ್ಸ್ ಏಜೆನ್ಸಿಯ ಮುಖ್ಯಸ್ಥ ಹಾಗೂ ಅಜಿತ್ ದೋವಲ್ ಭೇಟಿಯ ಯಾವುದೇ ವಿಷಯವನ್ನು ತಿಳಿಸಿಲ್ಲ, ಆದರೆ ಭದ್ರತಾ ವಿಚಾರಗಳು ಚರ್ಚೆಯಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. * ತಾಲಿಬಾನ್ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಆಫ್ಘಾನಿಸ್ತಾನದ ರಾಜ್ಯಧಾನಿ ಕಾಬೂಲ್ ನಿಂದ ಎಷ್ಟೋ ದೇಶಗಳು ತಮ್ಮ ರಾಯಭಾರಿ ಕಚೇರಿಯನ್ನು ಸ್ಥಳಾಂತರಿಸಿವೆ, ಅದರಲ್ಲಿ ಭಾರತವು ಒಂದಾಗಿದೆ, ಆದರೆ ರಷ್ಯಾ ಮತ್ತು ಪಾಕಿಸ್ತಾನ ದೇಶಗಳು ತಮ್ಮ ರಾಯಭಾರಿ ಕಚೇರಿಯನ್ನು ಸ್ಥಳಾಂತರಿಸಿಲ್ಲ ಎಂದು ತಿಳಿದು ಬಂದಿದೆ.