Job Description: * ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ 13 ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನು ಭಾರತೀಯ ಪ್ರಧಾನಿ ಮೋದಿ ವಹಿಸಲಿದ್ದಾರೆ, ಹಾಗೂ ಈ ಸಭೆಯಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಪಾಲ್ಗೊಳ್ಳಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಂಗ್ ಅವರು ಮಾಹಿತಿ ನೀಡಿದ್ದಾರೆ. * ಈ 13 ನೇ ಬ್ರಿಕ್ಸ್ ಶೃಂಗಸಭೆಯು ವರ್ಚುಲ್ ಮೂಲಕ ನಡೆಯಲಿದೆ, ಈ ಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (BRICS) ನಾಯಕರ ವರ್ಚುವಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. * ಈ ಶೃಂಗಸಭೆಯಲ್ಲಿ ಭಾರತವು ಪ್ರಮುಖವಾಗಿ ಬಹುಪಕ್ಷೀಯ ಸುಧಾರಣೆ, ಭಯೋತ್ಪಾದನೆ ನಿಗ್ರಹ, ಸುಸ್ಥಿರ ಅಭಿವೃದ್ಧಿ ಗುರಿ ಹಾಗೂ ಜನರ ವಿನಿಮಯಕ್ಕೆ ಡಿಜಿಟಲ್ ಮತ್ತು ತಾಂತ್ರಿಕ ಕ್ಷೇತ್ರ ಬಗ್ಗೆ ಚರ್ಚೆಯಾಗಲಿದೆ. * ಭಾರತೀಯ ಪ್ರಧಾನಿ ಮೋದಿ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು 2 ನೇ ಬಾರಿ ವಹಿಸಿಕೊಳ್ಳುತಿದ್ದಾರೆ, ಈ ಮೊದಲು 2016 ರಲ್ಲಿ ಗೋವಾ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.