Job Description: * ಭಾರತದ ಫೋನ್ಪೇ ಇದೀಗ 300 ಮಿಲಿಯನ್ ಬಳಕೆದಾರರನ್ನು ಹೊಂದಿದೆ, ಹಾಗೂ ಇದೀಗ ಫೋನ್ ಪೇ ಪಲ್ಸ್ ಎಂಬ ಸಂವಾದಾತ್ಮಕ ವೆಬ್ಸೈಟ್ ಅನ್ನು ಪರಿಚಯಿಸಿದೆ. * ಫೋನ್ ಪೇ ಪಲ್ಸ್ ವೆಬ್ಸೈಟ್ ಗ್ರಾಹಕರು ಮಾಡಿದ ಲಕ್ಷಾಂತರ ವಹಿವಾಟುಗಳನ್ನು ಹೊಂದಿದೆ, ಪ್ರಸ್ತುತ ಫೋನ್ ಪೇ ಡೇಟಾ 45% ಕ್ಕಿಂತ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. * ಫೋನ್ ಪೇ ಪಲ್ಸ್ ವರದಿಯು ಡಿಜಿಟಲ್ ಅಥವಾ ಆನ್ಲೈನ್ ಪಾವತಿ ಅಳವಡಿಕೆ ಹೇಗೆ ಪ್ರಬುದ್ಧವಾಗಿದೆ ಎಂದು ಗ್ರಾಹಕರಿಗೆ ತಿಳಿಸುತ್ತದೆ. * ಫೋನ್ ಪೇ: ಇದು ಭಾರತೀಯ ಡಿಜಿಟಲ್ ಪಾವತಿ ಹಾಗೂ ಹಣಕಾಸು ಸೇವೆಗಳ ಸಂಸ್ಥೆಯಾಗಿದೆ, ಇದು ತನ್ನ ಪ್ರಧಾನ ಕಚೇರಿಯನ್ನು ಕರ್ನಾಟಕದ ಬೆಂಗಳೂರಿನಲ್ಲಿ ಹೊಂದಿದೆ. * ಈ ಫೋನ್ ಪೇ ಸಂಸ್ಥೆಯನ್ನು 2015 ರ ಡಿಸೆಂಬರ್ ನಲ್ಲಿ ಸಮೀರ್ ನಿಗಮ್, ರಾಹುಲ್ ಚಾರಿ ಮತ್ತು ಬುರ್ಜಿನ್ ಇಂಜಿನಿಯರ್ ಸ್ಥಾಪನೆ ಮಾಡಿದ್ದಾರೆ, ಹಾಗೂ ಈ ಅಪ್ಲಿಕೇಶನ್ 2016 ರ ಆಗಸ್ಟ್ನಲ್ಲಿ ಆರಂಭವಾಯಿತು, ಹಾಗೂ 'UPI' ಯನ್ನು ಆಧರಿಸಿದೆ. * ಸದ್ಯ ಫೋನ್ ಪೇ ಭಾರತೀಯ 11 ಕ್ಕೂ ಅಧಿಕ ಭಾಷೆಗಳಲ್ಲಿ ಲಭ್ಯವಿದೆ.