Job Description: * ಇತ್ತೀಚಿಗೆ ತಾಲಿಬಾನ್ ಅಫ್ಘಾನಿಸ್ತಾನ ದೇಶವನ್ನು ತಮ್ಮ ವಶಕ್ಕೆ ತಗೆದುಕೊಂಡಿದೆ, ಇದೀಗ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ತಮ್ಮದೇ ಆದ ಹೊಸ ಸರ್ಕಾರವನ್ನು ರಚಿಸಿ ಘೋಷಣೆ ಮಾಡಿದೆ. * ತಾಲಿಬಾನಿಗಳ ಈ ಹೊಸ ಸರ್ಕಾರದಲ್ಲಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಅವರು ಆಫ್ಘಾನಿಸ್ತಾನದ ನೂತನ ಪ್ರಧಾನಿ, ಹಾಗೂ ಮುಲ್ಲಾ ಬರಾದರ್ ಅವರು ಆಫ್ಘಾನಿಸ್ತಾನದ ಉಪ ಪ್ರಧಾನಿಯನ್ನಾಗಿದೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. * ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಇದೀಗ ಅಫ್ಘಾನಿಸ್ತಾನ ಸ್ವಾತಂತ್ರ್ಯ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಅಮೇರಿಕ ನೇತೃತ್ವದ ಸೇನೆಯು ಅಫ್ಘಾನಿಸ್ತಾನ ತೊರೆದ ನಂತರ ತಾಲಿಬಾನಿಗಳು ಸರ್ಕಾರವನ್ನು ರಚಿಸಿದ್ದಾರೆ. * ಅಫ್ಘಾನಿಸ್ತಾನ ರಾಜ್ಯವು 18 ನೇ ಶತಮಾನದಲ್ಲಿ ಹೋತಕ್ ಮತ್ತು ದುರಾನಿ ರಾಜವಂಶಗಳೊಂದಿಗೆ ಆರಂಭವಾಯಿತು, ನಂತರ 19 ನೇ ಶತಮಾನದ ಕೊನೆಯಲ್ಲಿ ಅಫ್ಘಾನಿಸ್ತಾನವು ಬ್ರಿಟಿಷ್ ಭಾರತ ಮತ್ತು ರಷ್ಯಾದ ಸಾಮ್ರಾಜ್ಯದ ನಡುವಿನ 'ಗ್ರೇಟ್ ಗೇಮ್' ನಲ್ಲಿ ಬಫರ್ ರಾಜ್ಯವಾಗಿ ಹೊರಹೊಮ್ಮಿತು. * 1919 ರಲ್ಲಿ ಮೂರನೇ ಆಂಗ್ಲೋ-ಅಫ್ಘಾನ್ ಯುದ್ಧದ ನಂತರ, ಈ ದೇಶವು ವಿದೇಶಿ ಪ್ರಾಬಲ್ಯದಿಂದ ಮುಕ್ತವಾಗಿ ಅಂತಿಮವಾಗಿ 1926 ರ ಜೂನ್ ನಲ್ಲಿ ಅಮಾಘುಲ್ಲಾ ರಾಜನ ಅಡಿಯಲ್ಲಿ ಅಫಘಾನಿಸ್ತಾನ ಸಾಮ್ರಾಜ್ಯವಾಗಿ ಮಾರ್ಪಟ್ಟು ಸುಮಾರು ಐವತ್ತು(50) ವರ್ಷಗಳ ಕಾಲ ನಡೆಯಿತು. * 1980 ರಲ್ಲಿ ಮುಜಾಹಿದ್ದೀನ್ ಬಂಡುಕೋರರ ವಿರುದ್ಧ ಸೋವಿಯತ್ -ಅಫಘಾನ್ ಯುದ್ಧಕ್ಕೆ ಪ್ರಚೋದನೇ ನೀಡಿತು, ಮತ್ತೇ 1996 ರ ಹೊತ್ತಿಗೆ ಅಫ್ಘಾನಿಸ್ತಾನದ ಹೆಚ್ಚಿನ ಭಾಗವನ್ನು ಇಸ್ಲಾಮಿಕ್ ಮೂಲಭೂತವಾದಿ ಗುಂಪು ಅಂದರೆ ತಾಲಿಬಾನಿಗಳು ವಶಪಡಿಸಿ ಕೊಂಡು '5' ವರ್ಷಗಳ ಕಾಲ ಆಳ್ವಿಕೆಯನ್ನು ನಡೆಸಿದರು. * 2001 ರಲ್ಲಿ ಯುಎಸ್(ಅಮೇರಿಕ) ಆಕ್ರಮಣದ ನಂತರ ತಾಲಿಬಾನಿಗಳನ್ನು ಅಧಿಕಾರದಿಂದ ಕೆಳಗಿಳಿಸಿತು, ಆದರೆ ಸರ್ಕಾರ ಮತ್ತು ತಾಲಿಬಾನ್ ನಡುವೆ 20 ವರ್ಷಗಳ ಯುದ್ಧವು 2021 ರ ಕೊನೆಯಾಗಿ, ತಾಲಿಬಾನಿಗಳು ಮತ್ತೇ ಸರ್ಕಾರವನ್ನು ರಚಿಸಿ ಅಧಿಕಾರವನ್ನು ಪಡೆದುಕೊಂಡಿದ್ದಾರೆ.