Job Description: * ಪ್ರಸ್ತುತ ಗುಜರಾತ್ ರಾಜ್ಯವು ವತನ್ ಪ್ರೇಮ್ ಯೋಜನೆಯನ್ನು 2021 ರ ಆಗಸ್ಟ್. 7 ರಂದು ಆರಂಭಿಸಿದೆ. * ಗುಜರಾತ್ ರಾಜ್ಯದ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಅಧ್ಯಕ್ಷತೆಯಲ್ಲಿ ಗಾಂಧಿನಗರದಲ್ಲಿ ಈ ವತನ್ ಪ್ರೇಮ್ ಯೋಜನೆಯ ಸಭೆ ಯನ್ನು ನಡೆಸಲಾಗಿತ್ತು. * ಈ ವತನ್ ಪ್ರೇಮ್ ಯೋಜನೆಯಡಿ ಆಡಳಿತ ಮಂಡಳಿಯು ದಾನಿಗಳು ತಮ್ಮ ಹಣವನ್ನು ಅನಿವಾಸಿ ಗುಜರಾತಿಗಳು ಹಾಗೂ NRI ಗಳು ಗ್ರಾಮ ಮಟ್ಟದ ಯೋಜನೆಯ ವೆಚ್ಚದ ಶೇ. 60 ರಷ್ಟು ಕೊಡುಗೆಯಾಗಿ ನೀಡ ಬಹುದಾಗಿದೆ ಇನ್ನ ಉಳಿದ ಶೇ. 40 ರಷ್ಟು ಮೊತ್ತವನ್ನು ಗುಜರಾತ್ ರಾಜ್ಯ ಸರ್ಕಾರ ಭರಿಸಲಿದೆ ಎಂದಿದ್ದಾರೆ. * ಈ ವತನ್ ಪ್ರೇಮ್ ಯೋಜನೆಯು ಗುಜರಾತ್ ರಾಜ್ಯ ಸರ್ಕಾರದ ಮದರ್-ಇ-ವತನ್ ಯೋಜನೆಯ ಮರು ಪ್ಯಾಕೇಜ್ ನ ಆವೃತ್ತಿಯಾಗಿದೆ. * ಈ ವತನ್ ಪ್ರೇಮ್ ಯೋಜನೆ ಅಡಿಯಲ್ಲಿನ ಗ್ರಾಮ ಮಟ್ಟದ ಯೋಜನೆಗಳು: - ಶಾಲೆಗಳು ಮತ್ತು ಗ್ರಂಥಾಲಯದಲ್ಲಿ ಸ್ಮಾರ್ಟ್ ತರಗತಿಗಳು, - ಸಮುದಾಯ ಭವನ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಂಗನವಾಡಿಯಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ, - ನೀರಿನ ಮರುಬಳಕೆ, ಒಳಚರಂಡಿ, ಕೊಳಚೆನೀರಿನ ಸಂಸ್ಕರಣೆ, - ಬಸ್ ನಿಲ್ದಾಣ, - ಸೌರಶಕ್ತಿ ಚಾಲಿತ ಬೀದಿ ದೀಪಗಳು, ಹೀಗೆ ಹಲವು ಯೋಜನೆಗಳನ್ನು ಒಳಗೊಂಡಿದೆ.