Job Description: * ಜಪಾನ್ನ ಪ್ರಧಾನ ಮಂತ್ರಿ ಯೋಶಿಹಿಡೆ ಸುಗಾ ಅವರು ಇದೆ ಸೆಪ್ಟೆಂಬರ್ನಲ್ಲಿ ಜಪಾನ್'ನ ಪ್ರಧಾನಿ ಹುದ್ದೆ ತ್ಯಜಿಸಲಿದ್ದಾರೆ, ಹಾಗೂ ಪಕ್ಷದ ನಾಯಕರಾಗಿ ಮರು ಚುನಾವಣೆಗೆ ಸ್ಪರ್ಧೆ ಮಾಡುವದಿಲ್ಲ ಎಂದು ತಿಳಿಸಿದ್ದಾರೆ. * ಈ ಹಿಂದೆ ಜಪಾನ್ನ ಪ್ರಧಾನ ಶಿಂಜೋ ಅಬೆ ಅವರು ರಾಜೀನಾಮೆ ನೀಡಿದ ನಂತರ, ಯೋಶಿಹಿದೇ ಸುಗಾ ಅವರನ್ನು 2020 ರಲ್ಲಿ ಪ್ರಧಾನಿಯಾಗಿ ನೇಮಕ ಮಾಡಲಾಗಿತ್ತು. * ಪ್ರಸ್ತುತ ಜಪಾನ್ ರಾಷ್ಟ್ರವು ಇಲ್ಲಿಯವರೆಗೂ ತುರ್ತು ಪರಿಸ್ಥಿತಿಯಲ್ಲಿದೆ ಹಾಗೂ ಕೋವಿಡ್-19 ಅಲೆಯೊಂದಿಗೆ ಹೋರಾಡುತ್ತಿದೆ, ಇದೀಗ ದೇಶದಲ್ಲಿ 1.5 ದಶಲಕ್ಷಕ್ಕೂ ಅಧಿಕ ವೈರಸ್ ಪ್ರಕರಣಗಳು ಕಂಡು ಬಂದಿವೆ, ಇದಷ್ಟೇ ಅಲ್ಲದೇ ಸಾಂಕ್ರಾಮಿಕ ರೋಗ ಕೋವಿಡ್-19 ನಡೆವೆಯೂ ಅಂದರೆ 2021 ರಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ನಡೆಸಿದ್ದರಿಂದ ಇಲ್ಲಿನ ಪರಿಸ್ಥಿತಿ ಇನ್ನಷ್ಟು ಹಾಳಾಗಿದೆ ಎಂದಿದ್ದಾರೆ. * ಪ್ರಸ್ತುತ ಜಪಾನ್ನ ಆಡಳಿತದಲ್ಲಿರುವ ಪಕ್ಷವು ಅಧ್ಯಕ್ಷರನ್ನು ಆಯ್ಕೆ ಮಾಡಲು ಇದೇ 2021 ರ ಸೆಪ್ಟೆಂಬರ್. 29 ರಂದು ಚುನಾವಣೆಯನ್ನು ನಡೆಸಲಿದೆ, ಹಾಗೂ ಎಲ್ಡಿಪಿ ಸಂಸತ್ತಿನ ಬಹುಮತವನ್ನು ಪಡೆದವರಿಗೆ ಜಪಾನ್ನ ನಾಯಕರಾಗುವ ನಿರೀಕ್ಷೆಯಿದೆ. * ಯೋಶಿಹಿದೆ ಸುಗಾ ಅವರು ರೈತ ಕುಟುಂಬದಲ್ಲಿ ಜನಿಸಿದ್ದಾರೆ, ಇವರು ಪ್ರಥಮ ಬಾರಿಗೆ 1987 ರಲ್ಲಿ ಯೊಕೊಹಾಮಾ ಸಿಟಿ ಕೌನ್ಸಿಲ್ಗೆ ಆಯ್ಕೆಯಾಗಿದ್ದರು, ಮತ್ತೇ 2005 ರಲ್ಲಿ ಇವರು ಆಂತರಿಕ ವ್ಯವಹಾರಗಳು ಮತ್ತು ಸಂವಹನದ ಹಿರಿಯ ಉಪಾಧ್ಯಕ್ಷರಾಗಿ ನೇಮಕಗೊಂಡರು, ನಂತರ ಇವರನ್ನು 2020 ರಲ್ಲಿ ಜಪಾನ್ನ ಪ್ರಧಾನಿಯಾಗಿ ನೇಮಕ ಮಾಡಲಾಯಿತು.