Job Description: * ಪ್ರಸ್ತುತ ಚೀನಾ ದೇಶವು ಭಾರತದ ಜೊತೆಗೆ ಹಂಚಿಕೆಯಾಗಿರುವ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿನ ಸೇನೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲು ಹೊಸ ಕಮಾಂಡರ್ನ್ನು ನೇಮಕ ಮಾಡಿದೆ. * ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಭಾರತ ದೇಶದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಪೀಪಲ್ಸ್ ಲಿಬರೇಷನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್ ನ ಮುಖ್ಯಸ್ಥರನ್ನಾಗಿ ಜ.ವಾಂಗ್ ಹೈಜಿಯಾಂಗ್ ಎಂಬವರನ್ನು ನೇಮಕ ಮಾಡಿ ಆದೇಶವನ್ನು ಹೊರಡಿಸಿದ್ದಾರೆ. * ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾದ ಕೇಂದ್ರ ಸೇನಾ ಆಯೋಗವು ಜ. ವಾಂಗ್ ಹಾಗೂ ಇನ್ನು ನಾಲ್ಕು ಸೇನಾಧಿಕಾರಿಗಳಿಗೆ ಬಡ್ತಿ ನೀಡುವದರ ಜೊತೆಗೆ ಈ ಹೊಸ ಕಮಾಂಡ್ ನ ಮುಖ್ಯಸ್ಥ ಹುದ್ದೆಯನ್ನು ಜ. ವಾಂಗ್ ಅವರಿಗೆ ನೀಡಲು ನಿರ್ಧರಿಸಿದೆ.