Job Description: * ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. * ಈ ಮಾಹಿತಿಯನ್ನು ಅಮೇರಿಕದ ಗುಪ್ತಚರ 'ಮಾರ್ನಿಂಗ್ ಕನ್ಸಲ್ಟ್' ಎಂಬ ಸಂಸ್ಥೆಯು ಈ ಮಾಹಿತಿಯನ್ನು ನೀಡಿದೆ, ಈ ಮಾಹಿತಿಯನ್ನು 13 ರಾಷ್ಟ್ರಗಳ ನಾಯಕರುಗಳ ರಾಷ್ಟ್ರೀಯ ರೇಟಿಂಗ್ಸ್ ಆಧಾರದ ಮೇಲೆ ಈ ಸ್ಥಾನವನ್ನು ನೀಡಲಾಗಿದೆ ಎಂದು ತಿಳಿಸಲಾಗಿದೆ. * ಇತ್ತೀಚಿನ ಗ್ಲೋಬಲ್ ಅಪ್ರೂವಲ್ ರೇಟಿಂಗ್ಸ್ ಪ್ರಕಾರ (ಜಾಗತಿಕ ಸಮೀಕ್ಷೆಯೊಂದರ ಪ್ರಕಾರ) ಶೇ.70 ರಷ್ಟು ಜನರು ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. * ಮೆಕ್ಸಿಕೊ ಅಧ್ಯಕ್ಷ ಆಯಂಡ್ರೀಸ್ ಮ್ಯಾನುಯೆಲ್ ಲೊಪೆಜ್ ಒಬ್ರಡರ್ ಅವರು ಶೇ.64 ರಷ್ಟು ರೇಟಿಂಗ್ಸ್ ಪಡೆದು 2 ನೇ ಸ್ಥಾನದಲ್ಲಿದ್ದಾರೆ. * ಇಟಲಿ ಪ್ರಧಾನಿ ಮರಿಯೊ ದ್ರಾಘಿ ಅವರು ಶೇ.63 ರಷ್ಟು ರೇಟಿಂಗ್ಸ್ ಪಡೆದು 3 ನೇ ಸ್ಥಾನದಲ್ಲಿದ್ದಾರೆ, ಹಾಗೂ ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್ ಅವರು ಶೇ.52 ರಷ್ಟು, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶೇ.48ರಷ್ಟು, ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸ್ಸನ್ ಶೇ.48 ರಷ್ಟು ರೇಟಿಂಗ್ಸ್ ಪಡೆದು ನಂತರದ ಸ್ಥಾನದಲ್ಲಿದ್ದಾರೆ.