Job Description: * ಪ್ರಸ್ತುತ ಟೋಕಿಯೊ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ವಿಭಾಗದ ಸಿಎಚ್-6 ವರ್ಗದ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಕೃಷ್ಣಾ ನಾಗರ್ ಚಿನ್ನದ ಪದಕವನ್ನು ಜಯಿಸಿದ್ದಾರೆ. * ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ ಜೈಪುರದ ಕೃಷ್ಣಾ ನಾಗರ್ ಅವರು ಹಾಂಕಾಂಗ್ನ ಚು ಮನ್ ಕಾಯ್ ಅವರ ಎದುರು ಗೆಲುವು ದಾಖಲಿಸಿದ್ದಾರೆ. * ಈ ಮೊದಲು ಭಾರತೀಯ ಪ್ರಮೋದ್ ಭಗತ್ ಬ್ಯಾಡ್ಮಿಂಟನ್ ವಿಭಾಗದ ಎಸ್ಎಲ್-3 ವರ್ಗದ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು. * ಒಟ್ಟಾರೆ ಭಾರತಕ್ಕೆ ಈ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಐದು(5) ಚಿನ್ನದ ಪದಕ ಲಭಿಸಿದೆ. * ಈ ಪ್ಯಾರಾಲಿಂಪಿಕ್ಸ್'ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯ ಎಸ್ಎಲ್4 ಫೈನಲ್ ಪಂದ್ಯದಲ್ಲಿ ಕನ್ನಡಿಗ IAS ಅಧಿಕಾರಿ ಶಿವಮೊಗ್ಗದ ಸುಹಾಸ್ ಯತಿರಾಜ್ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಪ್ರಸ್ತುತ ಶಿವಮೊಗ್ಗದ ಕನ್ನಡಿಗ IAS ಅಧಿಕಾರಿ ಸುಹಾಸ್ ಯತಿರಾಜ್ ಅವರು ಸದ್ಯ ಉತ್ತರ ಪ್ರದೇಶದ ಗೌತಮಬುದ್ಧ ನಗರದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.