Job Description: * ಬಾಂಗ್ಲಾದೇಶದ ವಿಜ್ಞಾನಿ ಡಾ. ಫಿರ್ದೌಸಿ ಖಾದ್ರಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದಿದ್ದಾರೆ. * ಡಾ. ಖಾದ್ರಿ ಅಂತರಾಷ್ಟ್ರೀಯ ಡಯರೀಸ್ ಡಿಸೀಸ್ ರಿಸರ್ಚ್, ಹಾಗೂ ಬಾಂಗ್ಲಾದೇಶದ ಅಂತರಾಷ್ಟ್ರೀಯ ವಿಜ್ಞಾನಿಯಾಗಿದ್ದಾರೆ. * ವಿಜ್ಞಾನಿ ಡಾ. ಫಿರ್ದೌಸಿ ಖಾದ್ರಿ ಅವರು 2020 ರ ಲೊರಿಯಲ್-ಯುನೆಸ್ಕೋ ಫಾರ್ ವುಮೆನ್ ಇನ್ ಸೈನ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಪ್ರಸ್ತುತ ಆರಂಭಿಕ ರೋಗನಿರ್ಣಯ ಮತ್ತು ಜಾಗತಿಕ ವ್ಯಾಕ್ಸಿನೇಷನ್ ಮತ್ತು ಅಭಿವೃದ್ಧಿಶೀಲ ದೇಶಗಳಾದ್ಯಂತ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಂಕ್ರಾಮಿಕ ರೋಗಗಳನ್ನು ಅರ್ಥಮಾಡಿಕೊಳ್ಳುವ ಮತ್ತು ತಡೆಗಟ್ಟುವ ಕಾರ್ಯಕ್ಕಾಗಿ ಇವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. * ವಿಜ್ಞಾನಿ ಡಾ. ಖಾದ್ರಿ ಅವರು ಕಾಲರಾ ಲಸಿಕೆ ಹಾಗೂ ಟೈಫಾಯಿಡ್ ಕಾಂಜುಗೇಟ್ ಲಸಿಕೆಯ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು. * ವಿಜ್ಞಾನಿ ಡಾ. ಖಾದ್ರಿ ಅವರಿಂದ ಈ ವಿಜ್ಞಾನ ಮತ್ತು ಆರೋಗ್ಯ ಉಪಕ್ರಮಗಳನ್ನು ಅಭಿವೃದ್ಧಿಪಡಿಸುವ ಸಂಸ್ಥೆಯು 2014 ರಲ್ಲಿ ಸ್ಥಾಪಿಸಿದ್ದಾರೆ, ಈ ಸಂಸ್ಥೆಯು ಬಾಂಗ್ಲಾದೇಶದ ಸ್ಥಳೀಯ ಹಾಗೂ ಭೇಟಿ ನೀಡುವ ವಿಜ್ಞಾನಿಗಳ ವೈಜ್ಞಾನಿಕ ಚಟುವಟಿಕೆಯ ಕೇಂದ್ರವಾಗಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಈ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಏಷ್ಯಾದ ಅತ್ಯುನ್ನತ ಗೌರವ ಪ್ರಶಸ್ತಿಯಾಗಿದೆ, ಈ ಪ್ರಶಸ್ತಿಯನ್ನು1957 ರ ಏಪ್ರಿಲ್ ನಲ್ಲಿ ಸ್ಥಾಪಿಸಲಾಗಿದೆ, ಹಾಗೂ ಈ ಪ್ರಶಸ್ತಿಯನ್ನು ಏಷ್ಯಾದಲ್ಲಿ ನೊಬೆಲ್ ಪ್ರಶಸ್ತಿಗೆ ಸಮನಾಗಿದೆ ಪರಿಗಣಿಸಲಾಗಿದೆ. * ಪ್ರಸ್ತುತ ಈ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಏಷ್ಯಾದಲ್ಲಿ ಬಡತನ ನಿರ್ಮೂಲನೆ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ.