Job Description: * ಪ್ರಸ್ತುತ ಭಾರತೀಯ ನೌಕಾಪಡೆಯು ಭಾರತ್ ಲಿಮಿಟೆಡ್ (BEL) ನೊಂದಿಗೆ ಮೊದಲ ಡ್ರೋನ್ ವಿರೋಧಿ ಡ್ರೋನ್ ವ್ಯವಸ್ಥೆ ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಿದೆ. * ಈ ನವಲ್ ಆಂಟಿ ಡ್ರೋನ್ ಸಿಸ್ಟಮ್ (NADS) 'ಹಾರ್ಡ್ ಕಿಲ್' ಹಾಗೂ 'ಸಾಫ್ಟ್ ಕಿಲ್' ಸಾಮರ್ಥ್ಯಗಳನ್ನು ಒಳಗೊಂಡಿದೆ. * ಈ ನವಲ್ ಆಂಟಿ ಡ್ರೋನ್ ಸಿಸ್ಟಮ್ (NADS)ನ್ನು DRDO ಅಭಿವೃದ್ಧಿಪಡಿಸಿದೆ ಹಾಗೂ ಇವುಗಳನ್ನು BEL ನಿಂದ ಸಿದ್ದಪಡಿಸಲಾಗಿದೆ, ಪ್ರಸ್ತುತ ಭಾರತೀಯ ಸಶಸ್ತ್ರ ಪಡೆಗೆ ಸೇರ್ಪಡೆಯಾಗುವ ಮೊದಲ ಸ್ವದೇಶಿ ಅಭಿವೃದ್ಧಿ ಹೊಂದಿದ ಡ್ರೋನ್ ವಿರೋಧಿ ವ್ಯವಸ್ಥೆಯಾಗಿದೆ. * ಪ್ರಸ್ತುತ ಈ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಮಚಿಲಿಪಟನಂನಲ್ಲಿ BEL ನ ಘಟಕಗಳು ಒಟ್ಟಾಗಿ ಸಿದ್ದಪಡಿಸಿವೆ. * ಈ ನವಲ್ ಆಂಟಿ ಡ್ರೋನ್ ಸಿಸ್ಟಮ್ (NADS)ಗಳು ಮೈಕ್ರೋ ಡ್ರೋನ್ಗಳನ್ನು ಪತ್ತೆಹಚ್ಚುವ ಮತ್ತು ಜಾಮ್ ಮಾಡುವ ಸಾಮರ್ಥ್ಯವನ್ನು ಹೊಂದಿವೆ, ಹಾಗೂ ಇವುಗಳಲ್ಲಿ ಲೇಸರ್ ಆಧಾರಿತ ಕಿಲ್ ಮೆಕ್ಯಾನಿಸಂ ನ್ನು ಬಳಸಲಾಗುತ್ತದೆ, ಇದರಿಂದ ನೌಕಾ ಪಡೆಯ ಡ್ರೋನ್ ಬೆದರಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ. * ಪ್ರಧಾನಿ ನರೇಂದ್ರ ಮೋದಿಯವರ 2021 ರ ಗಣರಾಜ್ಯೋತ್ಸವದ ಸ್ವಾತಂತ್ರ್ಯ ದಿನದ ಭಾಷಣದ ಸಂಧರ್ಭದಲ್ಲಿ ಈ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಭದ್ರತಾ ರಕ್ಷಣೆಗಾಗಿ ಮೊದಲು ನಿಯೋಜನೆ ಮಾಡಲಾಗಿತ್ತು. * ಈ ಹಿಂದೆ 2021 ರ ಗಣರಾಜ್ಯೋತ್ಸವದ ಸಮಯದಲ್ಲಿ ಭಾರತೀಯ ಪ್ರಧಾನಿ ಮೋದಿ ಹಾಗೂ ಅಮೇರಿಕದ ಮಾಜಿ ಅಧ್ಯಕ ಟ್ರಂಪ್ ರೋಡ್ಶೋಗಾಗಿ ಈ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಅಹಮದಾಬಾದ್ನಲ್ಲಿ ನಿಯೋಜಿಸಲಾಗಿತ್ತು.