Job Description: * ಟ್ವಿಟರ್ ಸಂಸ್ಥೆಯು 'ಸೂಪರ್ ಫಾಲೋಸ್' ಎಂಬ ಹೊಸ ವೈಶಿಷ್ಟ್ಯವನ್ನು ಆರಂಭಿಸಿದೆ. * ಈ ಸೂಪರ್ ಫಾಲೋ ವೈಶಿಷ್ಟ್ಯವು ಸೃಷ್ಟಿಕರ್ತರಿಗೆ ವಿಶೇಷ ವಿಷಯವನ್ನು ಹಂಚಿಕೊಳ್ಳಲು ಚಂದಾದಾರಿಕೆಗಳನ್ನು ಮಾರಾಟ ಮಾಡಲು ಅವಕಾಶವನ್ನು ನೀಡುತ್ತದೆ. * ಟ್ವಿಟರ್ ನ ಈ ಸೂಪರ್ ಫಾಲೋಸ್ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ, ಹಾಗೂ ಇದನ್ನು ಅಧಿಕೃತವಾಗಿ ಉತ್ತರ ಅಮೆರಿಕಾದಲ್ಲಿನ ಸೃಷ್ಟಿಕರ್ತರ ಒಂದು ಸಣ್ಣ ಗುಂಪಿನೊಂದಿಗೆ ಆರಂಭಿಸಲಾಗಿದೆ. *ಪ್ರಸ್ತುತ ಈ ಹೊಸ ವೈಶಿಷ್ಟ್ಯವನ್ನು ಆಂಡ್ರಾಯ್ಡ್ ಸಾಫ್ಟ್ವೇರ್ನಿಂದ ಕಾರ್ಯ ನಿರ್ವಹಿಸುವ ಸ್ಮಾರ್ಟ್ಫೋನ್ ಹಾಗೂ twitter.com ವೆಬ್ಸೈಟ್ಗೆ ತರಲಾಗುವುದು, ಹಾಗೂ ಇದು ಬ್ರೌಸರ್ಗಳ ಮೂಲಕ ಲಭ್ಯವಾಗಲಿದೆ. * ಟ್ವಿಟರ್ ಸಂಸ್ಥೆಯು 'ಸೂಪರ್ ಫಾಲೋಸ್' ಎಂಬ ಹೊಸ ವೈಶಿಷ್ಟ್ಯದ ವಹಿವಾಟು ಶುಲ್ಕ: ಈ ಪ್ಲಾಟ್ಫಾರ್ಮ್ನಲ್ಲಿ ಸೃಷ್ಟಿಕರ್ತ $ 50,000 ಸಂಪಾದಿಸುವವರೆಗೆ ಟ್ವಿಟರ್ ಸಂಸ್ಥೆ ಮೂರು ಶೇಕಡಾಕ್ಕಿಂತ ಹೆಚ್ಚಿನ ಚಂದಾದಾರಿಕೆಗಳನ್ನು ವಹಿವಾಟು ಶುಲ್ಕವಾಗಿ ತೆಗೆದುಕೊಳ್ಳುವುದಿಲ್ಲ, ನಂತರ $ 50,000 ಕ್ಕಿಂತ ಹೆಚ್ಚಿನ ಮೊತ್ತ ಸಂಪಾದಿಸುವವರೆಗೆ ಟ್ವಿಟರ್ ನ ಪಾಲು 20 ಪ್ರತಿಶತಕ್ಕೆ ಹೆಚ್ಚಾಗುತ್ತದೆ, ಅಲ್ಲದೇ ಚಂದಾದಾರಿಕೆಗಳ ಮಾರಾಟ ಮಾಡುವ ಸೃಷ್ಟಿಕರ್ತರು ಆಪ್ ಸ್ಟೋರ್ ಶುಲ್ಕವನ್ನು ಪಾವತಿಸುತ್ತಾರೆ ಎಂದು ಸಂಸ್ಥೆ ತಿಳಿಸಿದೆ.