Job Description: * ಪ್ರಸ್ತುತ 2021 ರ ಸೆಪ್ಟೆಂಬರ್. 1 ರಂದು ಜಮ್ಮು ಮತ್ತು ಕಾಶ್ಮೀರ ನ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸ್ವ ಸಹಾಯ ಗುಂಪು (SHG) ಮಹಿಳೆಯರಿಗಾಗಿ 'ಸಾಥ್' ಎಂಬ ಗ್ರಾಮೀಣ ಉದ್ಯಮಗಳ ವೇಗವರ್ಧನೆ ಕಾರ್ಯಕ್ರಮವನ್ನು ಆರಂಭಿಸಿದರು. * ಈ 'ಸಾಥ್' ಎಂಬ ಉಪಕ್ರಮವು ಜಮ್ಮು ಮತ್ತು ಕಾಶ್ಮೀರದಲ್ಲಿನ '4' ಲಕ್ಷ ಮಹಿಳೆಯರನ್ನು ಒಳಗೊಂಡ 48,000 ಸ್ವಸಹಾಯ ಸಂಘಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ, ಈ ಉಪಕ್ರಮವು ಮಹಿಳೆಯರಿಂದ ತಯಾರಿಸಿದ ಉತ್ಪನ್ನಗಳಿಗೆ ಮಾರ್ಗದರ್ಶನ ಮತ್ತು ಮಾರುಕಟ್ಟೆಯನ್ನು ಒದಗಿಸುತ್ತದೆ. * ಭಾರತ ಸರ್ಕಾರವು ಮುಂದಿನ ದಿನಗಳಲ್ಲಿ 11,000 ಸ್ವಸಹಾಯ ಸಂಘಗಳನ್ನು ರಚಿಸುವ ಗುರಿಯನ್ನು ಹೊಂದಿದೆ. * ಈ 'ಸಾಥ್' ಎಂಬ ಉಪಕ್ರಮದ ಅಡಿಯಲ್ಲಿ ಸುಮಾರು 5,000 ಮಹಿಳೆಯರಿಗೆ ಕಾರ್ಯಾಗಾರಗಳನ್ನು ಆರಂಭಿಸಿ ಅದರಲ್ಲಿ 500 ಮಂದಿಯನ್ನು ಮುಂದಿನ ಹಂತದ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ , ಅಲ್ಲದೇ ಇನ್ನು 100 ಜನರನ್ನು ಮಾರ್ಗದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. * ಈ 'ಸಾಥ್' ಎಂಬ ಉಪಕ್ರಮದ ಅಡಿಯಲ್ಲಿ ಆಯ್ಕೆ ಮಾಡಲಾಗಿರುವ ಮಹಿಳೆಯರಿಗೆ ಕೃಷಿ, ಕೋಳಿ ಸಾಕಣೆ, ಪಶು ಸಂಗೋಪನೆ, ಕೈಮಗ್ಗ, ಕರಕುಶಲ ಇತ್ಯಾದಿ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತದೆ.