Job Description: * ಅಸ್ಸಾಂ ರಾಜ್ಯದಲ್ಲಿನ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಹೆಸರನ್ನು 'ಒರಂಗ್ ನ್ಯಾಷನಲ್ ಪಾರ್ಕ್' ಎಂದು ಬದಲಾವಣೆ ಮಾಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ, ಈ ಮಾಹಿತಿಯನ್ನು ಅಸ್ಸಾಂ ನ ಜಲಸಂಪನ್ಮೂಲ ಸಚಿವ ಪೀಯೂಷ್ ಹಜಾರಿಕಾ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. * ಈ ರಾಷ್ಟ್ರೀಯ ಉದ್ಯಾನವು ದರಾಂಗ್ ಮತ್ತು ಸೋನಿತ್ ಪುರ ಜಿಲ್ಲೆಗಳ ಮೂಲಕ ಹರಿಯುವ ಬ್ರಹ್ಮಪುತ್ರ ನದಿಯ ಉತ್ತರ ತೀರದಲ್ಲಿದೆ. * 1985 ರಲ್ಲಿ ಈ ಅರಣ್ಯವನ್ನು ವನ್ಯಜೀವಿ ಧಾಮ ಎಂದು ಹೆಸರಿಸಲಾಗಿತ್ತು, ಮತ್ತೇ 1999 ರಲ್ಲಿ ಈ ಅರಣ್ಯಕ್ಕೆ ರಾಷ್ಟ್ರೀಯ ಉದ್ಯಾನ ಎಂದು ಹೆಸರಿಸಲಾಗಿದೆ. * ಅಸ್ಸಾಂ ರಾಜ್ಯದಲ್ಲಿ ಯಾವುದೇ ರಾಷ್ಟ್ರೀಯ ಉದ್ಯಾನವನಕ್ಕೆ ವ್ಯಕ್ತಿಯ ಹೆಸರನ್ನು ಇಡಲಾಗಿಲ್ಲ, ಆದರೆ 2005 ರಲ್ಲಿ ಕಾಂಗ್ರೆಸ್ ಸರ್ಕಾರವು ಈ ಉದ್ಯಾನವಕ್ಕೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದು ನಾಮಕರಣ ಮಾಡಿತ್ತು. * ಆಸ್ಸಾಂನ ಓರಾಂಗ್ ರಾಷ್ಟ್ರೀಯ ಉದ್ಯಾನವನದ ಹೆಸರು ಬದಲಾವಣೆ ಕುರಿತಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.