Job Description: * ಭಾರತವು 2021 ರ ಆಗಸ್ಟ್ .31 ರಂದು BIMSTEC ದೇಶಗಳ 8ನೇ ಕೃಷಿ ತಜ್ಞರ ಸಭೆಯನ್ನು ಆಯೋಜಿಸಿತ್ತು. * ಈ BIMSTEC ಸಭೆಯಲ್ಲಿ ಬಾಂಗ್ಲಾದೇಶ, ಭೂತಾನ್, ನೇಪಾಳ, ಶ್ರೀಲಂಕಾ, ಭಾರತ, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ನ ಕೃಷಿ ಸಚಿವಾಲಯಗಳು ಪಾಲ್ಗೊಂಡಿದ್ದವು, ಹಾಗೂ ಈ ಸಭೆಯಲ್ಲಿ ಆಯಾ ರಾಷ್ಟ್ರಗಳ ಅಧ್ಯಕ್ಷರು ವಿಶ್ವಸಂಸ್ಥೆಯ ಆಹಾರ ವ್ಯವಸ್ಥೆ ಶೃಂಗಸಭೆ 2021 ಹಾಗೂ ಜಾಗತಿಕವಾಗಿ ಕೃಷಿ ಮತ್ತು ಆಹಾರ ವ್ಯವಸ್ಥೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ವಿವರಿಸಿದೆ. * ಪ್ರಸ್ತುತ ಈ BIMSTEC ನ್ನು 1997 ರಲ್ಲಿ ಸ್ಥಾಪನೆ ಮಾಡಲಾಗಿದೆ, ಈ BIMSTEC ರಾಷ್ಟ್ರಗಳು ಪರಸ್ಪರ ವ್ಯಾಪಾರ, ಸಂಪರ್ಕ ಹಾಗೂ ಸಾಂಸ್ಕೃತಿಕ, ತಾಂತ್ರಿಕ ಮತ್ತು ಆರ್ಥಿಕ ಅಭಿವೃದ್ಧಿಯ ಸಲುವಾಗಿ ಸ್ಥಾಪಿಸಿದ್ದಾರೆ. * ಈ ಮೊದಲು BIMSTEC ನ್ನು ತಂತ್ರಜ್ಞಾನ, ವ್ಯಾಪಾರ, ಶಕ್ತಿ, ಸಾರಿಗೆ, ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಎಂಬ '6' ವಲಯಗಳನ್ನು ಒಳಗೊಂಡಿತ್ತು, ಇದೀಗ ಇದನ್ನು 14 ಕ್ಷೇತ್ರಗಳಿಗೆ ವಿಸ್ತರಿಸಲಾಗಿದೆ. * ಈ ಹಿಂದೆ 2019 ರ ಜುಲೈ. 12 ರಂದು BIMSTEC ಕೃಷಿ ಮಂತ್ರಿಗಳ ಮೊದಲ ಸಭೆ ಮ್ಯಾನ್ಮಾರ್ನಲ್ಲಿ ನಡೆದಿದೆ.