Job Description: * ಪ್ರಸ್ತುತ ಭಾರತವು ಆಗಸ್ಟ್ ಸಮಯಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಾರತ ಅಧ್ಯಕ್ಷೀಯ ಸ್ಥಾನವನ್ನು ಸ್ವೀಕರಿಸಿತ್ತು, ಈ ಸಂಧರ್ಭದಲ್ಲಿ ಭಾರತವು ಅಫ್ಗಾನಿಸ್ತಾನ ದೇಶ ಹಾಗೂ ಜಾಗತಿಕ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಉತ್ತಮ ನಿರ್ಧಾರಗಳನ್ನು ತಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. * ಪ್ರಸ್ತುತ ಅಫ್ಗಾನಿಸ್ತಾನದ ಭೂ ಪ್ರದೇಶವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಮತ್ತು ದೇಶಗಳನ್ನು ಬೆದರಿಸಲು ಬಳಸಿಕೊಳ್ಳಬಾರದು ಎಂಬ ಕಠಿಣ ತೀರ್ಮಾನವನ್ನು ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷೀಯ ಸ್ಥಾನ ವಹಿಸಿಕೊಂಡ ನಂತರ ಅಂಗೀಕರಿಸಿದೆ. * ಭಾರತ ದೇಶವು ಜಾಗತಿಕ ಸುರಕ್ಷತೆ, ಉಗ್ರವಾದಕ್ಕೆ ಸಂಬಂಧಿಸಿ ತನ್ನ ನಿಲುವನ್ನು ತಿಳಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷೀಯ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿದೆ, ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯ ಕಾಯಂ ಪ್ರತಿನಿಧಿಯಾಗಿರುವ ಟಿ.ಎಸ್.ತಿರುಮೂರ್ತಿ ಟ್ವೀಟ್ ಮೂಲಕ ತಿಳಿಸಿದ್ದಾರೆ. * ಇನ್ನು ಮುಂದೆ ಸೆಪ್ಟೆಂಬರ್ ಅವಧಿಯವರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷೀಯ ಸ್ಥಾನವನ್ನು ಐರ್ಲೆಂಡ್ ವಹಿಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ.